Thursday, September 17, 2020

* ಜಯಬೇರಿ *

ಬೆಳೆದಾಗ ಸೇರುವುದು ನನ್ನ ಬಳಗ

ಸುಳಿಯದು ಸಂಬಂಧ ನಾ ಕಳೆದಾಗ

ಬೆಳೆಯುತ್ತಾ ಬಾಗು ಕಳೆದರೂ ನಗು 

ಬೆಳಗುವುದನ್ನೆ ಹೊಗಳುವದು ಜಗ //


ವೇದನೆಯು ಸಹಜ ಸಾಧನೆಗಿಳಿದಾಗ

ಕಾದವರು ಕೈಲಾಗದವರಲ್ಲ ತಿಳಿದಾಗ

ಬೆಲೆ ಬರುವದು ಬಂಧನ ಮುಗಿದಾಗ

ಬಹುಪಾಲು ಬಹುಪರಾಕ ನಿನಗಾಗ //


ಬರಿಯದ ಓದು ಬೆರೆಯದ ಸಂಬಂಧ 

ಬೆವರದ ದೇಹವದು ಬರಿ ದುರ್ಗಂಧ

ಬಯಲಿನಲ್ಲೂ ಬಂಗಾರ ಕಾಣು ತಂದೆ

ಬಾಳು ಹೊರಸೂಸುವದು ಶ್ರೀಗಂಧ//


ಬರಿ ಕನಸು ಕಾಣುವನು ಸೋಮಾರಿ 

ನನಸು ಮಾಡಲಾಗು ನೀ ಹಠಮಾರಿ

ಕಲ್ಲು ಮುಳ್ಳು ಕಾಣುವವು ತರೆಹೆವಾರಿ 

ಕಿತ್ತೆಸೆದಾಗ ಸಿಗುವುದು ಜಯಭೇರಿ //


        ಬಸನಗೌಡ ಗೌಡರ 

 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...