Monday, September 28, 2020

* ಬರವು ವರ *

ಬರವು ಬಂದರೆ ಬರಲಿ ವರಗಲ್ಲಿಗೆ 

ಹಚ್ಚಬಹುದು ಬಂಗಾರ ಸಿಗುವವರೆಗೆ   

ಬರವು ವರವಾದೀತು ಬಂಧುತ್ವಕ್ಕೆ//


ವರುಣನಿಲ್ಲದ ಧರಣಿ ಲಜ್ಜೆಯಿಲ್ಲದ 

ತರುಣಿಯಂತೆ ದಿಕ್ಕೆಟ್ಟು ತಿರುಗುವುದು 

ಶರಣಾಗುವುದು ಕೃಪೆಗಾಗಿ ಜೀವಜಲ//


ಆಹಾರವಿಲ್ಲದೆ ಗಿರಿಗಿರಣೆ ತಿರುಗುವವು 

ಸೀಳುಬಿದ್ದ ನೆಲದಲ್ಲಿ ಪ್ರಾಣಿ  ಪಶುಪಕ್ಷಿ  

ನಿನ್ನ ಕರುಣೆ ಹಬ್ಬಮಾಡಿತು ಬಕಪಕ್ಷಿ//


ದೊಂಬರಾಟವ ಮಾಡಿ ದಮ್ಮಡಿಗೆ

ತಿರುಗಿದಾಗ ಹಿಂದಡಿಯಿಟ್ಟ ಜನರಂತೆ

ಪಲಾಯನ ಮಾಡುವರು ನಿನ್ನವರು//


ಹರಿದ ನೋಟನು ಹಚ್ಚಿ ಪೆಂಡಯ 

ಸೇರಿಸಿ ಹೊರಗೆ ಹಾಕಿದ ಹಾಗೆ, ಸಾಗ 

ಹಾಕುವರು ನೀನ್ನವರು ಹಾಕಿ ಹೊಗೆ//


ಹುಳುಕು ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ 

ಸರಿದಂತೆ ತಿರುಗುವರು ನೀನ್ನವರು

ನೀ ಕೃಪೆ ತೋರಿದ ಸಂಪತ್ತಿನ ಮೇಲೆ// 

           ಬಸನಗೌಡ ಗೌಡರ 


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...