Tuesday, October 6, 2020

* ಕರಗಿದ ಅಜ್ಜ *

ನನ್ನಜ್ಜ ಹೊಟ್ಟೆಗೆ ಬಟ್ಟೆಯ ಕಟ್ಟಿ 
ಹರಿದ ಹಚಡಕೆ ಗಂಟುಕಟ್ಟಿ /
ಉಳಿಸಿದ ಬಳಸದೆ ಲೊಚಗುಟ್ಟಿ 
ಹೆಮ್ಮೆಯಿಂದ ತಿಂತೇವು ಕೈಕಟ್ಟಿ  //

ಸಹೋದರ ಮಕ್ಕಳ  ಸಹವಾಸ
ಹರಿದು ಹಂಚಿಕೊಳ್ಳುವು ಹರಸಾಹಸ/
ಆರು ತುಕಡಿಯ ನೂರಾರು ತುಂಡು
ಗಡಿ ತಗಾದೆಗೆ ತಗೆದರೆ ಜಗಮೊಂಡು//

ನೂರು ಹಿರಿಯರು ಹರಿದರು ತೀರದ
ಹಂಚಿಕೆ ಪಾಲು, ಮತ್ತೆ ಇವರ ಗೊಳು/
ಎತ್ತ ಸರಿದರು ನನಗೆ ಬರುತ್ತೆ ಪಾಳು
ಹೊಡದಾಡಿ ಬಿತ್ತು  ಭೂಮಿ ಬೀಳು//

ಹಾಳು ಮಾಡದೆ ಬೀಳು ಬಿಡದೆ ಕಾಳು 
ಕಾಳು ಆಯಿದು ಬೆಳೆದ ರಾಶಿ ಜೋಳ/
ಕಡಿದು ಸಂಕಟ ತುಂಬಿದ ತನ್ನವರ ತುತ್ತು
ಅರ್ಧಎಲೆಯಲಿ ಏರಿಸಿದನು ಮತ್ತು//

ನಾಳೆಯ ಬಾಳಿನ ಬೆನ್ನು ಹತ್ತಿ ಬದುಕು 
ಕೆತ್ತಿದ ಹತಾರದಂತೆ ತನ್ನ ಆಸೆ ಮರೆತು
ದಣಿದಾಗ ದೇಹ ಕರಗಿ ಸುಣ್ಣವಾಗಿತ್ತು
ಸುಟ್ಟ ಸುಣ್ಣದ ಬಿಳುಪೆ ನಮಗಿವತ್ತು//

           ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...