Saturday, January 30, 2021

* ಪ್ರಜೆ.....ಪ್ರಭುತ್ವ *

ಸತ್ಯದ ಕೊಲೆ ನಿತ್ಯ ನಡೆದರೂ 
ತಲೆ ಎತ್ತಿ ನಡೆಯದಂತೆ ಒತ್ತಿ ಹಿಡಿದವರು 
ಯಾರು ನನ್ನ, ಸತ್ಯವೆ ದೇವರೆನ್ನುತ
ನಡೆದವರು ನಾವು  //

ಕತ್ತೆಯಂತೆ ದುಡಿದರೂ ಮತ್ತೆ ಕೆಲಸ  
ಸುತ್ತ ತಿರುಗಲೂ ಬಿಡದವರು 
ಯಾರು ನನ್ನ ,ದುಡತವೆ ದುಡ್ಡಿನ 
ತಾಯಿ ಎನ್ನುವವರು ನಾವು//

ಎತ್ತರದ ಧ್ವನಿ, ಹತಾರದಂತೆ ಹರಿತ 
ಪ್ರತಿಭಟಿಸದಂತೆ ಮಾಡಿದವರು
ಯಾರು ನನ್ನ, ಮಾತು ಮಾಣಿಕ್ಯ 
ಮೌನ ಬಂಗಾರವೆನ್ನುವರು ನಾವು//

ಕಪಟಿಗಳಿಗೆ ಜೈಕಾರ ನಿಷ್ಠೆಯಿಂದ 
ದುಡಿದರೂ ಒಬ್ಬಂಟಿ ಮಾಡಿದವರು
ಯಾರು ನನ್ನ ,ನಿಷ್ಠುರವಾದಿ ಲೋಕ 
ವಿರೋಧಿ ಎನ್ನುವವರು ನಾವು//

ಮಾತುಗಳಲ್ಲೆ ಮನೆ ಮಾಡಿ ಜೋತು 
ಬೀಳಿಸಿ ಜೀತಗಾರನಾಗಿ ಮಾಡಿದವರು
ಯಾರು ನನ್ನ ,ಜೊತೆಯಾಗಿ ಬಾಳಿ 
ಸ್ವರ್ಗ ಎನ್ನುವವರು ನಾವು //

ಮತಹಕ್ಕು ಪಡೆಯಲು ಹತರಾದರು 
ಹಿರಿಯರು ನೀತಿಗೆ ನೀಡದೆ ತಡೆದರು
ಯಾರು ನನ್ನ, ಮತವೆ ಪ್ರಭುತ್ವದ 
ಪ್ರಭುಗಳೆನ್ನುವವರು ನಾವು //

           ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...