Saturday, January 9, 2021

* ಮಾಯಾಂಗನೆ *

ನಿನ್ನ ತುಟಿಯಂಚಿನ ಮಿಂಚು 
ಹೊಂಚು ಹಾಕಿ ಸಂಚು ಮಾಡಿತು 
ಎನ್ನ ಮನದ ಮೂಲೆಯಲ್ಲಿ //

ಹುಚ್ಚೆದ್ದು ಕಾಡುವ ಭಾವಗಳ 
ಬಲೆಯಲ್ಲಿಮಿಂದೆದ್ದು ವಿಲವಿಲನೆ 
ತಿರುಗಿದೆ ಬಿರುಗಾಳಿ ಸುಳಿಯಲ್ಲಿ //

ಬಂದು ಬಾಂಧವರನ್ನೆ ಬದಿಗಿರಿಸಿ
ಒಂದುಗೂಡಲು ಹಪಹಪಿಸಿ
ಕೊಂದು ಅರಳಿ ಸೆಳೆದ ಚೌಕಾಸಿ//

ಸಾವಿರ ಅಲೆ ಅಬ್ಬರಿಸಿ ಬೊಬ್ಬಿರಿದು
ಬೋರ್ಗರೆದ ಬೊಂಬೆಗಳೆ ಸೋತು 
ಶಾಂತಿಯ ಪಠಿಸಿ ಹಾರೈಸಿತು ಮಾಸಿ//

ಹಗಲು ರಾತ್ರಿ ಹೆಗಲಲ್ಲಿ ಮಲಗಿ
ಹಲಗಿಯ ಹೊಡೆದು ಸಲುಗೆ ಮೆರೆದು
ತೊಲಗದ ಹಸಿ ಹಸಿ ಆಸೆಗಳು ಬಿಸಿ//

ಬದುಕು ಬವಣೆ ಬಯಲು ಕಾತರ 
ಕವಲುಗಳರಿಯದೆ ತೆವಳುತ್ತಿವೆ ಮನ
ಕಂದಕ ಕಮರಿಗಿಳಿದಾಗ ರೋಧನ //

                  ಬಸನಗೌಡ ಗೌಡರ 

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...