Friday, January 8, 2021

ಹಂಗ್ಯಾಕೋ ಕಾಲದ !

ಕೆಲವರು ಮುಂದೆ ಹೋಗಲು 
ತಯಾರಿಲ್ಲ.
ಹಲವರು ಹಿಂದೆ ಹೋಗಲು
ತಯಾರಿಲ್ಲ.
ಬಹುಜನರಿಗೆ ಎಲ್ಲಿ ಹೋಗಬೇಕೆಂದು 
ತಿಳಿದಿಲ್ಲ  !
ತಿರುಗುತ್ತಿದೆ  ಕಾಲ ಚಕ್ರ 
ಇವರ ಹಂಗಿಲ್ಲ.
ಮೇಲಿನವನು ಕೆಳಗೆ 
ಕೆಳಗಿನವನು ಮೇಲೆ 
ನಡೆದಿದೆಯಲ್ಲ.
ಹೊಟ್ಟೆ ಪಾಡಿಗೆ ದುಡಿದವನು
ಹೊಟ್ಟೆ ಕರಗಿಸಬೇಕಿಲ್ಲ  
ಹೊಟ್ಟೆ ಬಿರಿಯುವಂತೆ 
ತಿಂದವನಿಗೆ ಇದೆಲ್ಲ ...
ಕಟ್ಟೆಯ ಪುರಾಣಕೆ 
ನಿಷ್ಠೆಯಿಂದ ನಡೆಯಬೇಕಿಲ್ಲ.
ದುಷ್ಟರ ಜೀವನ ಎಷ್ಟೆ ಎತ್ತರವಿರಲಿ
ಕಷ್ಟ ತಪ್ಪಿ ದ್ದಲ್ಲ.
ನಿನಗಿಷ್ಟವಾದದ್ದು ಮಾಡಿದರೆ 
ಕನಿಷ್ಟವೆಂದೂ ಆಗಲ್ಲ
ಆದರೆ ದಾರಿಯಲ್ಲಿ
ಇರಬೇಕಲ್ಲ ..?
ಇದ್ದರೆ ಹೆದರಬೇಕಾದವನು 
ನೀನಲ್ಲ.
ಜಗತ್ತೆ ನಿನ್ನ ಕಾಲಕೆಳಗೆ 
ಇರುತ್ತಲ್ಲ..

         ಬಸನಗೌಡ ಗೌಡರ 

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...