Saturday, March 6, 2021

* ಚಿಗುರಿನ ಚಿತ್ತಾರ*

ಮುಂಗಾರು ಮಳೆಯ ತಂಗಾಳಿ 
ಸೂಸಿ, ಸಂಗಾತಿ ಬಯಸಿ ಹೊಂಗನಸ ಕಂಡೆ, 
ಬಂಗಾರ ಬದುಕು ಬೆಂಡಾಗಿದೆ 
ಬಾಳೆಲ್ಲ ಬಯಲಾಗಿದೆ ಇಂದು //

ಹಸಿರು ಶಾಲನ್ನು ಹೊದ್ದು ಉಸಿರು 
ಬಿಟ್ಟಾಗ ಹಸಿವೆಯೆ ಆರಿತ್ತು ಅಂದು
ಚಳಿಗಾಲ ಕಳೆದು ಮಳೆಗಾಲವಿಲ್ಲ
ಸುಳಿಗಾಳಿಗುರುಳಿದೆ ನೆರಳಿಂದು//

ಕೆಸರುಂಡ ದಿನಗಳಲಿ, ಮೊಸರಂತೆ 
ಕಸುವು ಕಂಡೆ, ಹೊಸದೊಂದು ಸಂತೆ
ಮೈಯಲ್ಲ ಬೋಳು, ಬರಿ ಬಿಸಿಗಾಳಿ
ಹೊಸ ಗಾಳಿಗೆ ಹಂಬಲಿಸುವೆ ಇಂದು//

ಮತ್ತೆ ಮನ ಮಿಡಿಯುವ ತೋರಣ, 
ಮರಿ ಕೋಗಿಲೆಗಳ ಮಾಮರದ ಗಾನ
ಝೇಂಕರಿಸಿದೆ ಹೊಸ ದುಂಬಿಗಳ ವನ
ವಸಂತ ಚಿಗುರಿನ ಚಿತ್ತಾರವಿಂದು //

                ಬಸನಗೌಡ ಗೌಡರ 


No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...