Saturday, March 6, 2021

* ಕಾರು ಕಾರಬಾರು *

ಕಾರು ಕನಸು ಕಂಡವರು ನೂರು
ಕಾರ್ಯವೆ ನಮ್ಮ ಮನೆಯ ದೇವರು.
ಕರ್ತವ್ಯ ಕರೆಗಾಗಿ ಕಾಯ್ದವರೇನಿವರು
ಕಾಲಿಗೂ ಮೊದಲೆ ಶತ್ರುಗಳಿವರು.

ಹಿತವಾಗಿ ಬಳಸಿ ನಿಸರ್ಗದ ಗೆಳೆತನ 
ಬಯಸಿದರೆ ನನ್ನದೂ ಒಂದು  ಸಲಾಮು, 
ಹಚ್ಚಬೇಕು ಯಾರು ಮಲಾಮು ?
ಕಾರು ಇದ್ದವರಿಗೆ ಬಾಗುವುದು 
ಎಲ್ಲರ ಜಾಯಮಾನ, 
ಕಾಲು ಬಳಸಿದವನಿಗೇಕಿಲ್ಲ ಸನ್ಮಾನ !! 

ಇಂದು ನಾನೋದಿದೆ ಸೈಕಲ್ ಏರಿ 
ಕಛೇರಿಗೆ ನಡೆದ ಡಿಸಿಪಿ..
ಕಂಡವರು ಏನೆಂದರೊ ತಿಳಿದಿಲ್ಲ 
ಪ್ರಚಾರಕ್ಕಾಗಿ ಎಂದರೆ ಏನು ಮಡುವುದು ? 

ಅನ್ನಲಿ ಬಿಡಿ ಅವರವರ  ಭಾವಕ್ಕೆ 
ಅವರ ತೆರನಾಗಿರುವನ ಶಿವಯೋಗಿ. 
ಕಾರು ಕಾಣದ ಕಮಂಗಿಯೆಂದು 
ದೂರಬಹುದೇನೂ ಹಲವರು .

ದೂರಲಿ ಬಿಡಿ ನಮಗೇನು ಕಿವಿಗಳೇ 
ಕಿವುಡಾಗಿವೆ ಕರ್ಮದ ಪೆಟ್ಟು ತಿಂದು. 
ಕಿತ್ತು ತಿನ್ನುವ ಕಿರುಬಗಳಿಗಿಂತ ಕರ್ತವ್ಯ 
ಕನಸು ಕಂಡವರೆ ನನ್ನ ದೇವರು. 

ಕಕ್ಕ ಹೋಗಲು ಕಾರು ಬಳಸಿದರೆ
ಕಾಲಾದರೂ ಏಕೆ ಉಳಿದಾವು ?
ಕತ್ತಲೆ ಕಳೆದಾಗ ಇವರೆಲ್ಲ 
ಆಗುವರು ಬೆತ್ತಲು.

          🖋️ಬಸನಗೌಡ ಗೌಡರ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...