Monday, March 8, 2021

* ಮಹಿಳಾ ಸ್ಮರಣೆ *

ನಾನು ನಾನೆಂದರೆ ನಾನಲ್ಲ 

ನನ್ನದೆನ್ನುವುದು ಇಲ್ಲಿಲ್ಲ ನನಗಾಗಿ 

ನೀನಿರಬೇಕೆನ್ನವುದು ಸ್ವಾರ್ಥದ ಫಲ

ನಿಸ್ವಾರ್ಥ, ಜಗ ಕಲಿತದ್ದೆ 

ಸ್ತ್ರೀ ಕುಲದಿಂದ


ತಾನು ಹುಟ್ಟಿದ ಮನೆಯಲ್ಲ

ಕೊಟ್ಟ ಮನೆ ಕರುಳಿನ ಸೇವೆಗಾಗಿ 

ಕಹಿಯನೆ ಸಿಹಿಯಾಗಿಸಿದ ಫಲ

ತ್ಯಾಗಕೆ  ಹೆಸರು ಬಂದುದೆ 

ಸ್ತ್ರೀ ಕುಲದಿಂದ


ನಿದ್ದೆಯ ಕಳೆದದ್ದು ತಿಳಿಯಲಿಲ್ಲ 

ಎದ್ದವರ ಸೇವೆಯದು ಪರರಿಗಾಗಿ

ಶುದ್ದಿಗೆ ಸತತ ಸಂಘರ್ಷವೆ ಫಲ

ಸಹಣೆಗೆ ಹೆಸರು ಬಂದುದೆ 

ಸ್ತ್ರೀ ಕುಲದಿಂದ 

 

ಹಳಸಿದನ್ನವನುಂಡು ಹೇಳಲಿಲ್ಲ 

ಹೊಸತನ ಕಲಿಸಿದಳು ಮನೆಗಾಗಿ 

ಹರಿದ ವಸನವೂ ಸಹನೆಯೆ ಫಲ 

ಮಧುರ ಜೇನು ಸಂಗ್ರಹವೆ 

ಸ್ತ್ರೀಕುಲದಿಂದ


ಯಾರು ನಿನಗೆ ಸಮಬಲವಿಲ್ಲ

ಹಣವೆಂದವ ಹೆಣವಾಗಿ ಬಂದ.

ಮನುಕುಲವರಳುವದು ನಿನ್ನ ಫಲ 

ಮನೆ ದೀಪ ಬೆಳಗುವುದೆ 

ಸ್ತ್ರೀಕುಲದಿಂದ


          ಬಸನಗೌಡ ಗೌಡರ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...