Monday, April 19, 2021

* ಎನ್ನಂಗಳದ ಹೊಂಗೆ *

ಎನ್ನ ಅಂಗಳದ ಹಾದಿ, ಯಾರು 
ತುಳಿದರೇನು ? ಎಡ ಬಲಕೆ ಹೊಂಗೆ/ 
ಇಂಪಾಗಿ ಹಾಡು ಹಾಡತಾವು ಬೃಂಗ 
ಚಿಲಿಪಿಲಿ ಬಾರಿಸತಾವು ಮೃದಂಗ.//

ನಾನೆ ಹಾಕಿದೆ ನಲ್ಲಿಯ ನೀರಿಗೆ 
ನೋಡು ನೋಡುತ್ತಿದ್ದಂತೆ ಹೊಂಗೆ/ 
ಬೆಳೆಯಿತು ಎತ್ತರ ಮೀರಿ ಮಾಳಿಗೆ 
ನನ್ನದೆನ್ನುವ ಅಧಿಕಾರವಿದೆ ಯಾರಿಗೆ //

ಹಾರು ಹಕ್ಕಿಯು ಹಾಯ್ದು ಹೋದರೆ                    
ಕರೆದು ,ಹೂಮಾಲೆ ಹಾಕುವ ಕರಳು !
ದಣಿವು ಆರಿಸಿ ಸಂತೈಸುವ ನೆರಳು.
ಧರಣಿ ಕೊಡುಗೆ ನನ್ನದೆಂದರೆ ಮರಳು //

ಉರಿಯುವ ರವಿ ಕಿರಣದ ಸವಾಲು
ಮೂಡಣಕೆ ನಮ್ಮನೆಗೆ ನೀ ಕಾವುಲು
ಹಸು, ಹಸುಳೆ ನಿನ್ನೊಡಲ ಮಕ್ಕಳು
ಹೊಸಬಾಳಿಗೆ ಮುನ್ನುಡಿ ಬರೆದವಳು//

ಹನಿ ನೀರು ಹಾಕಿ,ಮನ ಬಾರ ಋಣ
ಮನದಲೇಳುವ ಮಲೀನಕೇನಿದೆ ಬಾಣ
ಸಾವಿರ ಸಾವಿರ ಜನರಿಗೆ ಸ್ವಚ್ಛ ಗಾಳಿ 
ಜಗಕೆಲ್ಲ ತಂಪೆರದರೂ ನೀಚ ದಾಳಿ//

ಹಚ್ಚ ಹಸುರಿನ ಮಧುವನಗಿತ್ತಿ ಇವಳು 
ಎನ್ನಂಗಳದ ಮಂಗಳ ಗೌರಿಯಿವಳು 
ಮನೆಯ ತುಂಬುವ, ಮನ ತುಂಬುವ
ಮಧುಬನದ ಮಾಂತ್ರಿಕ ಶಕ್ತಿಯಿವಳು//

                  ಬಸನಗೌಡ ಗೌಡರ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...