Wednesday, January 26, 2022
*ಎಳೆಯೋಣ ತಲೆ ಎತ್ತಿ *
Saturday, January 15, 2022
* ಎಚ್ಚರದಿಂದ ಇರೋಣ *
Friday, January 14, 2022
* ಸಡಗರದ ಸಂಕ್ರಾಂತಿ *
Thursday, January 13, 2022
* ಕಳೆದುಕೊಂಡಿದ್ದೇನೆ *
ಯಾರಾದರೂ ಇದ್ದರೆ
ಹುಡುಕಿ ಕೊಡಿ ...!
ನಮಗೆ ಮಹಡಿ ?
ನಮಗೂ ಬೇಕು
ನಮ್ಮ ಮಕ್ಕಳಿಗೂ ಬೇಕು//
ಸಿಗಬೇಕು ಎಲ್ಲಿಂದ ?
ನಾನು ಕಿಲಾಡಿ
ಕೇಳಲು ಕೊಡುವೆನು
ಇವರಿಗೆಲ್ಲ ಲಂಚ.. ?
ಕೊಟ್ಚರೇನು ಶಿವಾ.
ಕುಂಭ ಕರ್ಣನ ವಂಶ
ಮಲಗಿದ್ದಾರಲ್ಲಾ
ಇಲ್ಲದೆ ಹಾಸಿಗೆ ಮಂಚ..
ಇರಲಿ ಬಿಡಿ ..
ಹೇಳುವವರು ?
ಹೇಳುವವರಿಗೇನು ಬರ
ಕೊಟ್ಟರೆ ಮೂರು ನಿಮಿಷ
ಕುಟ್ಟುವರು ನೂರು ನಿಮಿಷ
ಗಟ್ಟಿ ಕಾಳು ಬರುವುದೆ
ಇಲ್ಲಾ ..ಆದರೇನು ?
ಪಟ್ಟು ಬಿಡದ ಜಗಜಟ್ಟಿಗಳು
ಕೊಟ್ಟು ಬಿಡುವೆವು ಕುದರೆ....
ಕಾಯದೆ ಏರಿಸುವರು ಪೇರಿ ...
ಲಂಗು ಇಲ್ಲ ,ಲಗಾಮೆ ಇಲ್ಲ
ಜಿಗದದ್ದೆ ಜಿಗದಿದ್ದು...
ಸಂದಿ, ಗೊಂದಿ ಒಂದೂ
ಉಳಿಯುವದಿಲ್ಲ.
ಗಟಾರಗಳೆ ಇವರ ವಠಾರಗಳು!
Sunday, January 9, 2022
* ಕಾಲ ಕಳೆದ ಮೇಲೆ *
Saturday, January 8, 2022
* ಮಾಯಾಂಗಿನಿ *
Tuesday, January 4, 2022
* ಕಟ್ಟಿದ ಕನಸು *
Monday, January 3, 2022
*ವ್ಯಕ್ತಿಗಾಗಿ ವ್ಯವಸ್ಥೆ *
Saturday, January 1, 2022
ಹಾಲ ಹಂಡೆ
ಅಂದು ಬದಾಮಿ ತಾಲೂಕಿನ ಹಳ್ಳಿ ಎಂದು ಕರೆಯಿಸಿಕೊಂಡು ಇಂದು ಗುಳೇದಗುಡ್ಡ ತಾಲೂಕಿನ ಗ್ರಾಮವಾಗಿರುವ ಹಾನಾಪೂರ ಎಸ್ ಪಿ ಗ್ರಾಮ ಇಂದು ಹಂತ ಹಂತವಾಗಿ ಪ್ರಸಿದ್ಧಿಗೆ ಬರಲು ಕಾರಣ ! ಅದುವೆ ಹಾಲು ಹಂಡೆ ಅಥವಾ ಅದನ್ನು ಹಾಲ ಹಂಡೆ ಎಂದು ಕರೆಯುತ್ತಿದ್ದಾರೆ ಆದರೆ ಸ್ಥಳಿಕರು ಅದನ್ನು ಅನುಕೂಲಕ್ಕಾಗಿ ಹೊಂಡೆ ಎಂದು ಕರೆಯುವುದನ್ನು ರೂಢಿಸಿಕೊಂಡಸಿದ್ದನ್ನು ಕಾಣಬಹುದು ಬಹುಕಾಲದವರೆಗೆ ಅಜ್ಞಾತವಾಗಿ ಉಳಿದಿದ್ದ ಈ ಜಲಪಾತ ಬಯಲಿಗೆ ಬರಲು ಕಾರಣವೆಂದರೆ ಗುಳೇದಗುಡ್ಡದ ಕೆಲವು ಉತ್ಸಾಹಿ, ನಿಸರ್ಗ ಪ್ರೇಮಿಗಳಾದ ನೇಕಾರ ತರುಣರಿಂದ ಎಂದರೆ ತಪ್ಪಾಗಲಾರದು ಯಾಕೆಂದರೆ ತಮ್ಮ ಬೇಸರವನ್ನು ಕಳೆದುಕೊಳ್ಳಲು ಇಲ್ಲಿಗೆ ಬಂದು ಸಂತೋಷ ಪಟ್ಟು ಹೋಗುತ್ತಿದ್ದರು ಅದು ಪತ್ರ ಕರ್ತರವರೆಗೂ ತಲುಪಿ ಹೆಚ್ಚು ಜನಪ್ರೀಯತೆ ಪಡೆಯಿತು ಇದಕ್ಕೆ ಕಾರಣೀಭೂತರಾದ ಮಲ್ಲಿಕಾರ್ಜುನ ರಾಜನಾಳ ಬಸವರಾಜ ಯಂಡಿಗೇರಿ,ಮಲ್ಲಿಕಾರ್ಜುನ ಕಲಕೇರಿ ಯಂತಹ ಉತ್ಸಾಹಿ ಪತ್ರಕರ್ತರು ಈ ಜಲಪಾತಕ್ಕೆ ಬೆಳಕು ಚೆಲ್ಲಿದರು.ಈ ಜಲಪಾತ ವಿರುವುದು ನಾನು ಜನಿಸಿದ ಊರಿನಲ್ಲಿ ಎನ್ನುವುದು ಒಂದು ಹೆಮ್ಮೆಯ ವಿಷಯ. ನಮ್ಮೂರು ನಮ್ಮ ಹೆಮ್ಮೆ. ಮಳೆಗಾಲದಲ್ಲಿ 25 ರಿಂದ 30 ಅಡಿಗಳಿಂದ ದುಮ್ಮಕ್ಕಿ ಹರಿಯುವ ಜಲಪಾತ ನೋಡುವುದೇ ಒಂದು ಹಬ್ಬ. ಇದು ಎಲ್ಲಿದೆ ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ ಗುಳೇದಗುಡ್ಡದಿಂದ ಗಂಜಿಕೆರೆ ಮೇಲೆ ಹಾದು ಟ್ರೆಕಿಂಗ್ ಮಾಡುತ್ತಾ ಹೋದರೆ 5 ರಿಂದ 6 ಕಿಲೋಮೀಟರನಲ್ಲಿ ಅಲ್ಲಿಗೆ ತಲುಪಬಹುದು .ಆ ಸುಂದರ ನಿಸರ್ಗ ಸವಿ ಬಲ್ಲವನೇ ಬಲ್ಲ ಜುಳು ಜುಳು ಹರಿಯುವ ಜರಿಗಳು ಅಲ್ಲಲ್ಲಿ ಪಡಿಗಳು ಅದರಿಂದ ನಿರ್ಮಾಣವಾದ ಸಣ್ಣ ಪುಟ್ಟ ಗುಹೆಗಳು ನಮ್ಮನ್ನು ವಿಶಿಷ್ಟವಾದ ಲೋಕಕ್ಕೆ ತೆಗೆದು ಕೊಂಡು ಹೋಗುತ್ತವೆ. ಹೋಗುವಾಗ ಒಂದಷ್ಟು ಊಟಕ್ಕಾಗಿ ಬುತ್ತಿ ಕಟ್ಟಿ ಕೊಂಡು ಹೋಗಬೇಕು ಸ್ನಾನ ಮಾಡಿದ ಮೇಲೆ ಊಟ ಮಾಡಿದರೆ ಅದರ ರುಚಿ ಯಾವ ಪೈವ ಸ್ಟಾರ್ ಹೋಟೆಲ್ ನಲ್ಲೂ ಸಿಗದು. ಇನ್ನು ವಯಸ್ಸಾದವರು ಈ ಮಾರ್ಗವಾಗಿ ಹೋಗುವುದು ಸ್ವಲ್ಪ ಕಠಿಣ ಅನಿಸಬಹುದು, ಅದಕ್ಕೂ ಪರಿಹಾರ ಇದೆ ಏನೆಂದರೆ ಗುಳೇದಗುಡ್ಡ ದಿಂದ 7 ಕಿಲೋಮೀಟರ್ ಬಸ್ ಅಥವಾ ಟಂ ಟಂ ನಲ್ಲಿ ಹಾನಪೂರ ಎಸ್ ಪಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಪೂರ್ವಕ್ಕೆ ಕಾಲುದಾರಿಯಲ್ಲಿ ಹೊಲದಲ್ಲಿ ಸು.500 ಮೀಟರ್ ನಡೆದರೆ ನಿಮಗೆ ಸಿಗುವುದೇ ಹಾಲುಹಂಡೆ (ಹೂಂಡೆ) ಆ ನಿಸರ್ಗದ ಜಲಪಾತ ಸೃಷ್ಟಿಯ ಯಾಗಲು ಅಲ್ಲಿ ಪ್ರಾಕೃತಿಕ ಹಿನ್ನೆಲೆಯೆ ಕಾರಣ ಈ ಜಲಪಾತ ಇರವು ಜಾಗದ ಹಿಂದೆ ಅಪಾರ ಪ್ರಮಾಣದ ಪಡೆಯಿರುವ ಗುಡ್ಡವಿವದೆ ಅಲ್ಲ ದೆ ಪಶ್ಚಿಮ ದಿಕ್ಕಿನಲ್ಲಿ ಅರ್ಧ ಕಿಲೋಮೀಟರ್ ಅಂತರದಲ್ಲಿ ಸುಂದರವಾದ ಕೆರೆಯು ಇದೆ ಇದರಲ್ಲಿ ಸೇಕರಣೆಯಾದ ಹೆಚ್ಚು ವರಿ ನೀರೂ ಕೂಡಾ ಈ ಜಲಪಾತಕ್ಕೆ ಬರುತ್ತಿದೆ ಮಳೆಗಾಲದಲ್ಲಿ ಬೀಳುವ ಆ ಸುಂದರವಾದ, ಹಾಲಿನಂತೆ ನೊರೆ ಇರುವ ಹೊಂಡ ಹಾಲಹಂಡೆ ಯಾಗಿರಬಹುದು ಈ ಸುಂದರವಾದ ಹಾಲಹಂಡೆ ಹಾನಾಪೂರ ಹೆಮ್ಮೆ ಇದಕ್ಕೆ ಸಮಾಜ ಸೇವಾ ಸಂಸ್ಥೆಗಳು ಸರಕಾರಗಳು ಕಾಳಜಿ ವಹಿಸಿದರೆ ಉತ್ತಮ ಪ್ರವಾಸಿ ತಾಣವಾಗುವದರಲ್ಲಿ ಯಾವುದೆ ಸಂಶಯವಿಲ್ಲ.
*ಅಪ್ಪ ನಮ್ಮೆಲ್ಲರ ಛಪ್ಪರ *
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...