ಯಾರಿವಳು ಈ ಮಾಯಾಂಗಿನಿ
ಬಿಡದಂತೆ ಮಾಡಿಹಳು ಮೋಡಿ
ನೋಡದಿದ್ದರೆ ಕಾಡುವಳು ಕೋಡಿ
ರಾತ್ರಿ, ಹಗಲು ...ದಿನವಿಡಿ...,
ಎಷ್ಟು ನೋಡಿದರು ಸಾಲದು,
ಇನ್ನಷ್ಟು ನೋಡುವಂತೆ
ಮಾಡುವಳು ಈ ಬಿಡಾಡಿ.
ಅಪ್ಪ, ಅಮ್ಮ, ಅಣ್ಣ ತಂಗಿ
ಯಾರಾದರು ಸರಿ
ನೀ ಸಿಗದಿದ್ದರೆ ಯುದ್ಧ
ಮಹಾಯುಧ್ಧ !
ಸತ್ತ ಸೈನಿಕರನ್ನು ಹುಗಿಯಲು
ಸ್ಥಳವಿಲ್ಲ ಮತ್ತೆ ಹೊಂದಬೇಕೆಂಬ ಬಯಕೆ
ನಿತ್ಯ ನೀನಿಲ್ಲದೆ ಬದುಕಿದವರ
ಪತ್ತೆ ಮಾಡಲು ಸುತ್ತಿ ...
ನಾನೂ ಸತ್ತೆ ...
ಗುಡಿ,ಗುಂಡಾರ ಇಗರ್ಜಿ,
ಶಾಲೆ, ಕಾಲೇಜು ಚಿತ್ರ ಮಂದಿರ
ಎಲ್ಲೆಲ್ಲೂ ನಿನ್ನದೆ ಯಜಮಾನಿಕೆ
ನೀನಿಲ್ಲದೆ ಗರ್ಭಗುಡಿ
ಅದು ಮಂದಿರ ಹೇಗಾದಿತು?
ನಸುಕಿನಲ್ಲಿ ನಾನೆದ್ದು ಮೊದಲು
ಕೈಮುಗಿಯುವುದೆ ನಿನಗೆ !
ಕೈ ಮುಗಿಯದವರು ಯಾರಾದರೂ
ಇದ್ದರೆ ಹೇಳಿ ?
ಅವರಿಗೆ ನಾನು ಎರಡು ಬಾರಿ
ಕೈ ಮುಗಿಯವೆ.
ಕಲಿಸುವ ಗುರುಗಳು .
ಕಂಗಾಲಾಗಿದ್ದಾರೆ ನೀನಿಲ್ಲದೆ ....
ಕತ್ತರಿಸಲು ಖಡ್ಗಗಳಲ್ಲಿ
ರಕ್ಷಿಸಿಕೊಳ್ಳುಲು ಗುರಾಣಿಗಳಿಲ್ಲ
ಬಿತ್ತರಿಸಲೂ ನೀನೇ ಬೇಕು.
ಉತ್ತರಿಸಲು ನೀನೇ ಬೇಕು.
ಸತ್ಯವಾಗಿ ಹೇಳುತ್ತಾನೆ
ನೀನೆ ನನ್ನ ಅರ್ಧಾಂಗಿಣಿ.....
ಅಲ್ಲ ಅಲ್ಲ ....ನೀನೆ ನನ್ನ ಎದೆಯ
ಮೇಲೆ ಮಲಗಿರುವ
ಮೋಬೈಲಾಂಗನಿ....ಹ್ಹಾ.ಹ್ಹಾ !!
ಬಸನಗೌಡ ಗೌಡರ
No comments:
Post a Comment