Monday, February 28, 2022
* ಶಿವರಾತ್ರಿಯ ಶಿವಧ್ಯಾನ *
Saturday, February 26, 2022
ರವಿವಾರ ರಗಳೆ ಚಿಂತನೆ
Friday, February 25, 2022
* ವರ್ತಮಾನದ ಗಾಡಿ *
* ವರ್ತಮಾನದ ಗಾಡಿ *
ಇದು ಕರ್ತಾರನ ವರ್ತಮಾನದ
ಗಾಡಿ,ಇದಕ್ಕೆ ಜೋಡಿಸಿದರು
ಸಿಲಿಕಾನ್ ಚಕ್ರದ ಗಾಲಿ
ನಡೆಸಿವರು ಸುಡುಗಾಡ ದಾರಿ !
ಕಡಿವಾಣ ವಿಲ್ಲದ ಕುದುರೆ
ಓಡುತಿದೆ ಕಣ್ಣಿಗೆ ಪಟ್ಟಿಯ ಕಟ್ಟಿ
ಕಾಲನ ಕತ್ತಿ, ಮೇಲೆ ಭಿತ್ತಿ /
ಯಾರ ಕುತ್ತಿಗೆಗೆ ಸುತ್ತುವುದು
ಯಾರು ಬಲ್ಲ ,ಅರಿಯದೆ ತಿರುಗಿದೆ
ಗಿರಗಿರನೆ ಮೇಲೆ ಕೆಳಗೆ,
ಕ್ರಮಿಸುವುದು ದೂರ....
ಮೇಲೆ ಹೋದರೆ ಕೆಳಗೆ ಇಳಿಯುವಾಶೆ
ಕೆಳಗಿಳಿದರೆ ಮೇಲೇರುವಾಶೆ //
ಬಯಕೆಗಳು ಹೊದ್ದು ಮಲಗಿವೆ
ನಿದ್ದೆ ಮಾಡಲು ಇಲ್ಲಿ ಇಲ್ಲ ಪುರಸೊತ್ತು
ಮುಂದೆ ಹೋಗುವುದೇ ಎಲ್ಲರ ಚಿತ್ತ /
ಅರೆಗುಂಜಿ ಹೀರುವ ಇರುವೆಗೂ
ಹಿರಿಯಾಶೆ ಆರು ತಿಂಗಳ ಅನ್ನ
ತನ್ನದಾಗಿಸುವಾಸೆ, ಮೂರೆ ತಿಂಗಳಿಗೆ
ಮುಗಿಯುವುದು ಅದರ ಸಂತೆ //
ಹೆಕ್ಕಿ ಕಟ್ಟುವ ಹುತ್ತ ಹೆರವರದು.
ಹತ್ತಿ ಹತ್ತಿ ನೋಡುವುದೆ
ಅದರ ಭ್ರಮಣದ ಸಂಭ್ರಮ/
ಹಾವುಗಳು ವಾಸಮಾಡುವವು
ಎನ್ನುವುದು ಅದಕೇನು ಗೊತ್ತು //
ಹಾರುವ ಹಕ್ಕಿಗಳ ಮೇಲೆ
ಉರಿಯುವ ಅಸ್ತ್ರಗಳು,
ಯಾರ ದೀಪ ಆರಿದರೇನು ?
ದಾರಿ ನನ್ನದೆ ಆಗಬೇಕು !
ನಿನ್ನ ದಾರಿ ಕತ್ತಲಾದ ಮೇಲೆಯೇ
ಗೊತ್ತಾಗುವುದು ಕರ್ತಾರನ
ವರ್ತಮಾನದ ಗಾಡಿ //
Tuesday, February 22, 2022
Sunday, February 20, 2022
* ಕನ್ನಡದ ಕನಸುಗಾರ *
Wednesday, February 16, 2022
ಬೆಳದಿಂಗಳ ಕಾವ್ಯಾನುಸಂಧಾನ ಸರಣಿ 4
Monday, February 14, 2022
*ಪ್ರೀತಿಸಲು ಒಂದು ದಿನ ಬೇಕೆ?*
Saturday, February 12, 2022
* ಮತ್ತೆ ಹೊಸ ಸಾಮ್ರಾಟ್ *
Wednesday, February 9, 2022
* ಹಾರುವ ಹುಚ್ಚು ಬಯಕೆ *
Tuesday, February 8, 2022
* ಮುಕ್ತಿಯ ಗುರಿ ಒಂದೇ *
Monday, February 7, 2022
*ಉತ್ತಮ ಆರಂಭ ಅರ್ಧ ಮುಗಿದಂತೆ *
Saturday, February 5, 2022
ಭಾವ ಪೂರ್ಣ ಶ್ರದ್ಧಾಂಜಲಿ
Tuesday, February 1, 2022
* ಕ್ಷಮಿಸು ತಂದೆ *
ಮಾಡಲಿ ಬಿಡಿ ಅವರೂ ಮನುಷ್ಯರೆ ಅಲ್ಲವೆ !
ಗಾಂಧೀಜಿಯವರೆ ಹೇಳಿದ್ದಾರಲ್ಲವೆ ನಾನು ತಪ್ಪು ಮಾಡಿ ತಿದ್ದಿಕೊಂಡಿದ್ದೇನೆ ಎಂದು.
ಯಾಕೆಂದರೆ ಅವರೂ ಮನುಷ್ಯರೆ ಅಲ್ಲವೆ.!
ಮಗನ ಮಂತ್ರಿ ಮಾಡಲು ಮೈಕ್ ಹಿಡಿಯಲಿಲ್ಲ.ಮೊಸಳೆ ಕಣ್ಣೀರು ಸುರಿಸಲಿಲ್ಲ
ಆದರೂ ದೋಷಗಳ ಪಟ್ಟಿ!
ಮಾಡಲಿ ಬಿಡಿ ಅವರು ಮನುಷ್ಯರೆ ಅಲ್ಲವೆ!
ಕಂತೆ ಕಂತೆ ಹಣ ಎಣಿಸಲಿಲ್ಲ
ಮೈತುಂಬ ಸೂಟು ಬೂಟು ಹಾಕಲಿಲ್ಲ ಆದರೂ ದೋಷಗಳ ಪಟ್ಟಿ ! ಮಾಡಲಿ ಬಿಡಿ ಯಾಕೆಂದರೆ ಅವರು ಮನುಷ್ಯರೆ ಅಲ್ಲವೆ !
ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕುಟುಂಬದ ಪ್ರಗತಿ ಮರೆತರು, ಹಿಡಿದ ತತ್ವಕ್ಕಾಗಿ ಜೈಲಿನಲ್ಲಿ ಮುದ್ದೆ ಮುರಿದರು. ಕಸ್ತೂರಿ ಬಾ ಸಾವಿನ
ಬಾಗಿಲು ತಟ್ಟುವಾಗ ಸೂಪ್
ಕುಡಿಯದಂತೆ ತಾಕೀತು ಮಾಡಿ
ಸತ್ಯ ಅಹಿಂಸೆಯ ಬೆನ್ನು ಬಿದ್ದರಲ್ಲ
ಆದರೂ ದೋಷಗಳ
ಪಟ್ಟಿ ! ಮಾಡಲಿ ಬಿಡಿ ಯಾಕೆಂದರೆ
ಅವರು ಮನುಷ್ಯರೆ ಅಲ್ಲವೆ !
ದೇಶ ಸ್ವತಂತ್ರ ಗೊಂಡಾಗ
ಮಂತ್ರಿಯಾಗಬೇಕೆಂದು ಸಮಾಲೋಚನೆ
ಮಾಡಲಿಲ್ಲ! ನೌಕಾಲಿಯಲ್ಲಿ ಕೋಮುವಾದದ ದುಳ್ಳರಿಗೆ ಬಲಿಯಾದವರ ಕಣ್ಣೀರು ಒರೆಸಿದರಲ್ಲ.
ಆದ್ರೂ ಪಟ್ಟಿ ! ಮಾಡಲಿ ಬಿಡಿ ಯಾಕೆಂದರೆ ಅವರು ಮನುಷ್ಯರೆ ಅಲ್ಲವೆ !
ಗಾಂಧೀಜಿ, ಗೊಡ್ಸೆ ಗುಂಡಿಗೆ ಹೆದರಿದರೊ
ಇಲ್ಲೂ ... ನಿತ್ಯ ಬರುವ ಗುಂಡಿಗೆ ನಾನಂತೂ ಹೇಳುವುದು ಒಂದೆ, ಕ್ಷಮಿಸು ತಂದೆ.
* ಬೇಂದ್ರೆ ಹಚ್ಚಿದ ಲಾಂದ್ರ*
ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಮತ್ತು *ಬೆಂಗಳೂರು*
*ವರಕವಿ ದ.ರಾ. ಬೇಂದ್ರೆ*
ರವರ ಜನ್ಮದಿನದ ಪ್ರಯುಕ್ತ ರಾಜ್ಯ ಮಟ್ಟದ
ಹನಿಗವನ ರಚನೆ ಸ್ಪರ್ಧೆ
ಇರಲಿಲ್ಲ ಜಾತ್ರೆ !
ಭಾಷೆ ಭಾವ ಸೋತು
ಬಾಳು ಅನ್ನವಿಲ್ಲದ ಪಾತ್ರೆ
ಅರಳು ಹುರಿದಂತೆ
ಸಾಧನಕೇರಿಯಿಂದ ಸಾಗಿ ಬಂತು
ಅಮೃತ ಮಾತ್ರೆ !
ಬೆಂದು ಬೆಳೆದ ಬೇಂದ್ರೆ
ಹಾಕಿ ಎಳದ ಲಾಂದ್ರ !
ಭಾಷೆ ಬದುಕು ಅರಳಿ
ನೆಲವು ಹುಣ್ಣಿಮೆಯ ಚಂದ್ರ !
ಶ್ರೀ ಬಸನಗೌಡ ಗೌಡರ
ಗುಳೇದಗುಡ್ಡ
*ಅಪ್ಪ ನಮ್ಮೆಲ್ಲರ ಛಪ್ಪರ *
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...