Monday, February 7, 2022

*ಉತ್ತಮ ಆರಂಭ ಅರ್ಧ ಮುಗಿದಂತೆ *

ಶಿಸ್ತು, ಸಂಸ್ಕಾರ ಅವಳಿ 
ಸಯಾಮಿ ಸಹೋದರರು.
ಒಬ್ಬರು ಬಿಟ್ಟು ಇನ್ನೊಬ್ಬರು 
ಇರಲಾರರು ..
ಒಂದು ನಾಣ್ಯದ ಎರಡು 
ಮುಖಗಳು ಬೇರೆಯಾದರೆ 
ನಡೆಯದ ಕೊಟ್ಟಿ ನಾಣ್ಯ  
ಯಾರು ಸ್ವೀಕರಿಸಲಾರರು !
ನೀಡುವವನು ಹತ್ತಿರ 
ಎತೆಚ್ಚವಾಗಿಯೇ  ಇರಬೇಕು 
ಪಡೆದು ಕೊಳ್ಳುವ ಗಿರಾಕಿಯೂ 
ಬಕಪಕ್ಷಿಯಂತೆ
ಬಡವನಾಗಿಯೆ ಇರಬೇಕು.
ಅವನನ್ನು ಸಿರಿವಂತರನ್ನಾಗಿ 
ಮಾಡಲು ಚೆನ್ನಾಗಿಯೇ ದುಡಿಯಬೇಕು ದುಡಿಸಿಕೊಳ್ಳಬೇಕು 
ದುಡಿಸಿಕೊಳ್ಳವವರಲ್ಲಿ ಕಡಿಮೆ ಯಾದರೆ ?
ಪಡೆಯುವವರಿಗೆ ನೀಡುವದಾದರೂ ಹೇಗೆ ?
ಹಡೆದವರ ಪಡೆಯಲು ಕಳುಹಿಸುವುದು 
ಸಹಜ .....ನೋಡದೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕೆಂದೇನು ಇಲ್ಲವಲ್ಲ? 
ಕಲ್ಲಾಗಿ ಕುಳಿತು ಕೊಳ್ಳುವ ಮೊದಲು 
ಸಿರಿವಂತರ ದೇಹಿಯಾದರೂ 
ತಪ್ಪೇನೂ ಇಲ್ಲ  ಒಪ್ಪಿ ನಡೆದರೆ ತೃಪ್ತಿ .
ಇಲ್ಲದಿದ್ದರೆ ಅಲ್ಲಿಗೆ ಸಮಾಪ್ತಿ !  
ಸಿರಿವಂತರಿದ್ದಾರೆ ಎಂದು 
ನೀಡಲು ಬಂದವನ ಗಡಗಿಯ 
ತುಂಬಾನೂ ಇರಬೇಕು ಅಂಬಲಿ ! 
ಪಡೆಯುವವನಿಗೂ ಹಸಿವು ಇರಬೇಕಲ್ಲ ? 
ಹಸಿವಿಲ್ಲದೆ ಬಂದರೆ ?
ಬಂದು ಹಾಕುವರು 
ದೆಶೆ ದೆಶೆಯಲ್ಲಿ ಘೋಷಣೆ... 
ಕಾರ ಇಲ್ಲ, ಉಪ್ಪುಇಲ್ಲ,..ಹುಳಿ ಇಲ್ಲ  
ನೀಡುವವನ ಗತಿ ಅದೋಗತಿ 
ದಂಡದ ಕೆಳಗಡೆ ದುಂಡಾಗಿ 
ಹೋಗಬೇಕಾದೀತು 
ಮಂಡಿಯೂರಿ ಉಣ್ಣಬೇಕಾದೀತು  
ಇದು ಬೇಕಾಗಿತ್ತಾ?  
ಹನ್ನೆರಡು ಜನ ಬುದ್ಧಿ ವಂತರು 
ಹುಟ್ಟುವುದು  ಸಹಜ... 
ಒಬ್ಬ ಆರು ಇನ್ನೊಬ್ಬ ಮೂರು  
ನಾಲ್ಕೂವರೆಗೆ ತಂದು 
ನಿಲ್ಲಿಸುವವರೂ ಉಂಟು 
ಚೌಕಾಸಿ ಬದುಕು...
ಕೊನೆಗಾಣಿಸಬೇಕು ಹೇಗೆ? 
ಆರಂಭದಲ್ಲಿಯೇ ಅವಳಿ ಸಹೋದರರನ್ನು 
ಹಿಡಿಯಬೇಕು  ಉತ್ತಮ ಆರಂಭ  
ಅಂತಿಮದ ಅರ್ಧ ಮುಗಿದಂತೆ 
ಯಾವುದು ಬೇಕು ?
ಅದು ನಿಮಗೆ ಬಿಟ್ಟಿದ್ದು. 

ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...