Tuesday, February 8, 2022

* ಮುಕ್ತಿಯ ಗುರಿ ಒಂದೇ *

ಭವ್ಯ ಭಾರತ ಬೆಳಗಲು 
ಭೇಧವೆಂಬ ವಿಷ ತುಳಿದು
ಭಾವೈಕ್ಯತೆಯ ಹೂವು  
ಅರಳಿಸುವೆವು ಇಂದು
ಅರಳಿಸುವೆವು ಇಂದು//

ಸಂತರ ನಾಡಿದು ಪಂಥ ನೂರು 
ಮನೆ ಮಂದಿರ ಮಸೀದಿಗಳ 
ಮೇಲೆ,  ಶಾಂತಿಯ ಪಾರಿವಾಳ 
ಹಾರಿಸುವೆವು ಇಂದು 
ಹಾರಿಸುವೆವು ಇಂದು//

ಹಿಂದೂ, ಕ್ರೈಸ್ತ , ಶಿಖ್ ಇಸಾಯಿ
ಮುಸ್ಲಿಂ ರೆಲ್ಲರೂ ಒಂದೆ.. ಒಂದೆ.
ಭಾರತ ಮಾತೆಯ ಮಕ್ಕಳು ನಾವು
ಭವ್ಯ ಪರಂಪರೆಯ ವಾರಸಾದಾರರು
ನಾವೆಲ್ಲಾ  ಒಂದೇ. //

ತಂದು ಬೆಂಕಿಯ ಇಟ್ಟರೆ ಏನು 
ತಿಂದು ಜೀರ್ಣಿಸಿ ಬಿಟ್ಟೇವು
ಮೂರು ದೆಶೆಗೂ ಹರಡಿದ 
ಶರಧಿ,ಜಲ ವರುಣವಾಗಿ  
ಸುರಿಯುವೆವು ಇಂದು //
 
ನರನಾಡಿ ಯಂತೆ ಹರಿದ 
ಆಚಾರ್ಯತ್ರರ ವಿಚಾರಶೀಲ
ನುಡಿ ,ಪ್ರಸ್ಥಭೂಮಿಯ 
ಸ್ವಸ್ಥ ಮನ ಜನಗಳು, ತುಂತುರ 
ಹನಿ ಹರಡುವೆವು ಇಂದು  //

ಕಾಡು ಹಾದಿ, ಕಲ್ಲು ಮುಳ್ಳು 
ಅಡೆತಡೆಗಳು ನೂರೊಂದು  
ಮೆಟ್ಟಿ ನಡೆಯಲು ಪಥಗಳು 
ಹಲವು, ಭಕ್ತಿಯ ಗುರಿ ಒಂದೆ 
ಮುಕ್ತಿಯ ಗುರಿ ಒಂದೆ //

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...