Saturday, February 12, 2022

* ಮತ್ತೆ ಹೊಸ ಸಾಮ್ರಾಟ್ *

ನಾನು,ನನ್ನದು ನನ್ನಿಂದ 
ಎನ್ನುವವರೊಮ್ಮ ಚೆನ್ನಾಗಿಯೇ ನೋಡಬೇಕು, ಚೆನ್ನಾಗಿಯೇ ಕೇಳಬೇಕು !  
ಮಣ್ಣಿಗೂ ಹಪಹಪಿ ನನ್ನದು, ನನ್ನವರು 
ಯಾರೆಂದು ಮೊದಲೆ ಪಟ್ಟಿ 
ಮಾಡಿಟ್ಟಿದೆ ಜೋಕೆ ? 
ತನ್ನವರು ಯಾರೆಂದು ಭಿನ್ನ ಮಾಡಳು.. 
ಒಂದೆ, ಸಮಾನತೆ ! 
ಮೂರು ಆರರ ಜಾಗೆ  
ಇಲ್ಲಾ ನಾಲ್ಕು ಎಂಟರ ತುಂಡು. 
ಒಣಗಿದರೂ ಅಷ್ಟೇ 
ಒಣಗದಿದದ್ದರೂ ಅಷ್ಟೇ 
ಕೆರೋಸಿನ ಇದೆಯಲ್ಲ...! 
ಈಗೀಗ ಹರಿದ ಟ್ಯೂಬ್ 
ಟಾಯರ್ ಗಳು ಉಂಟು, 
ಬೂದಿ ಮಾಡಲು,ಅದಕ್ಕೂ 
ಇದೆಯಲ್ಲಾ ಮಣ್ಣಿನ ನಂಟು.  
ಅಸ್ತಿಗಳಿಗೂ ಗೌರವ ಉಂಟು..! 
ಮಣ್ಣಿನ ಮೇಲೆ ಸುರಿದ ವರುಣ 
ಸಾಲಾಗಿ  ಶಿಸ್ತಿನಿಂದ ನಡೆದಾಗ 
ನದಿ ಸರೋವರ, ಗಂಗೆ,ತುಂಗೆ..
ಹೆಸರು ಏನಾದರೇನು ಮುಳುಗಿಸಲು 
ಮುಳುಗಿ ತರ್ಪಣ ನೀಡಲು. 
ಮತ್ತೆ ಇದ್ದೆ ಇದೆ .ನನ್ನದು ನಿನ್ನದು   
ನೀನೇ ಗಳಿಸಿದ ಆಸ್ತಿ ಈಗ 
ನೀನು ಬರಿ ಅಸ್ತಿ ! ಆಸ್ತಿಗಾಗಿ ನಡೆದಿದೆ ಕುಸ್ತಿ                 ಸಂಬಂಧಿಕರೆ ಶತೃಗಳು. ಸಹೋದರರೆ ದಾಯಾದಿಗಳು,ಇವರಾರು ಅಪರಿಚಿರಲ್ಲ 
ಒಂದೊಮ್ಮೆ ನಿನ್ನಿಂದ ಸಹಾಯ ಪಡೆದವರೆ !  ಬಹುಪರಾಕ ಹೇಳಿದವರೆ,ಚಾಮರ ಬೀಸಿದವರೆ .... ಬೀಸಿದ ಗಾಳಿಗೆ ಉಬ್ಬಿ ಇದ್ದ ಬಿದ್ದವರನ್ನು ಸುಲಿದು ಮಹಲು ಮಂಟಪ, ಮಾನವತ್ವ ಮೀರೀದ 
ಸಾಮ್ರಾಜ್ಯ ಕಟ್ಟಿದೆ.....
ನನ್ನದೆ ಸಾಮ್ರಾಜ್ಯವೆಂದು ಭಾವಿಸಿದೆ.... ಉಡದಾರವನ್ನೆ ಬಿಡದವರು 
ಉಳಿಸುವರೇನು ಸಾಮ್ರಾಜ್ಯ 
ಮತ್ತೆ ಹೊಸ ಸಾಮ್ರಾಟ್ !

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...