Friday, May 20, 2022

* ಮುಂಗಾರು ಮಳೆ *

ಮುಂಗಾರು ಮಳೆ 
ಏನು ನಿನ್ನ ಮಹಿಮೆ ! 
ಜೇನು ಮಧುವಿನಂತೆ 
ನಿನ್ನ ಸೃಷ್ಟಿಯ ಗುಣ.! 
ಸಿಗದು ನುಡಿ, ಬರೆದು ಬೀಗಲು
ಬರವು ಎನಗೆ ಕಡವ ತರಲೆ ?
ಅರಳಿ ನಿಂತ ಮರಳು ಕಣ 
ಸೂಸಿ ಬಂತು ಶ್ರೀಗಂಧ ಪವನ
ಮೇ ಮಾಸದುರಿವ ಕೆನ್ನಾಲಿಗೆ 
ಸೀಳಿ ಹರಿಸಿದೆ ತಂಪಿನ ದಳ !
ಗುಡುಗು ಸಿಡಿಲು ಪಡೆದ 
ಭುವಿ ಒಡಲ ಕಾವು ಗರ್ಭಧರಿಸಿ 
ಉಸಿರೆ ಹಸಿರು ಕಾನನ !
ಹೊಸ ಶಕೆಯು ಸುತ್ತಿ ಬರುವೆ
ಬೆಸೆವ ನೀನೆ ಸಾರ್ವಭೌಮ.!  
ಅಶ್ವಿನಿ, ಭರಣಿ, ಕೃತಿಕ ಬಲ
ಓಡಿ ಬರುತಿದೆ ರೋಹಿಣಿ.
ನಾಮ ಹಲವು ನಿಯಮ 
ಒಂದೆ ವರುಣ !
ಬಿರಿದ ನೆಲ, ಬರಿದು ಕೆರೆ 
ಹರಿಸಿದೆ ಮೇಲೆ ನಿನ್ನ ವರ
ದುಮ್ಮಿಕ್ಕುವ ಬಲ ಒಂದೇ ಎರಡೇ 
ಕಣ್ಣು ಸಾಲವು ಜಗದ ತುಂಬಾ 
ಜೀವ ಜಲ ಜಿಗಿಯಿತು 
ಕಾರಂಜಿ ತನನ !

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...