Monday, June 6, 2022

* ಸ್ವಾರ್ಥದ ಗಾಡಿ *

ಓಡುತಿದೆ ನರನ ಸ್ವಾರ್ಥ ಬಂಡಿ
ಕಡಿಯಬೇಡಿ ಪರಿಸರದ ಕೊಂಡಿ

ಮರಗಳ ಮಾರಣ ಹೋಮ
ಬರದುರಿಗೆ ಬಿರಿಯಿತು ಸತ್ವ ನೆಲ
ಕರವೆ ಕರ್ಮದ ಕಹಿ ಮೂಲ 
ಅರಿತರೆ ಅಣು ಅಣು ಅಮೃತ ಜಲ!

ನಿನ್ನದೆ ಕರ ತಂದಿದೆ ಬರ ಒಂದು ಕಡೆ, 
ನಾಕ ಕಟ್ಟಿದೆ ಇನ್ನೊಂದು ಕಡೆ  
ಖರೀದಿಸದೆ ಕಂಡಿದೆ ಮುನ್ನುಡಿ
ಹಣೆಬರಹ ಬರೆದಿದೆ ನೀ ಪಡೆ

ಹಸಿರು ಉಳಿದರೆ ಉಸಿರಿನ ಕಳೆ 
ಹಕ್ಕಿ ಪಕ್ಕಿಗಳ ಬರುವದು ಗುಳೆ !
ಹರಸಾಹಸ ಬಿಡು ಬರಿ ಗೊಳು
ಹರಸುವಳು ಭೂರಮೆ ತಾಳು !

ಬೇಗ ಬೆಳೆಯಲು ಬೆಟ್ಟ ಮಾರಣ
ಕಟ್ಟಡವೆ ಇವರ ನೆಮ್ಮದಿ ಭವನ.
ಕಾಣಬಹುದೆ ಸಂತಸದ ಜೀವನ
ಕತ್ತರಿಸಬೇಕು ಕನಸಿನ ಬ್ರಮಣ !

ನಂಬಿ ನಡೆದರೆ ಸಿಗುವುದಂಬಲಿ  
ನಂಬದಿರೆ ಪರಿಸರದಲ್ಲಿ ನೀ ನರಬಲಿ
ತುಂಬಬೇಕು ವೈಚಾರಿಕ ನೆಲೆ
ಕರದಲೆ ಕಾಣುವೆ ಸ್ವರ್ಗವೆ ಇಳೆ !  
  

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...