Sunday, June 12, 2022

" ಕಷ್ಟಗಳೆ ಇಷ್ಟ"


 
ಇಷ್ಟಗಳ ಮುಟ್ಟಲು
ಕಷ್ಟಗಳೆ ಮೆಟ್ಟಿಲು
 
ದಾರಿ ಬಹು ದೂರ 
ಏರಬೇಕು ನೀ ವೀರ 
ತಳಮಳವು ಸಹಜ 
ತಾಳ್ಮೆ ಯೊಂದೆ ಅಸ್ತ್ರ 

ತವಕವು ಉಂಟು. 
ವಿವೇಕದೊಂದಿಗಿರಲಿ ನಂಟು
ಕಾಗೆಗಳು ಕರೆಯುವವು ಕೆಳಗೆ 
ನೀಡುವವು ಹೋಳಿಗೆ. 

ಮೂರು ದಿನದ ಬುತ್ತಿ 
ನೂರು ದಿನಕಿವರ ಚಿತ್ತ 
ಹತ್ತುವಾಗ ಕಾಣುವೆ 
ಭರವಸೆಯ ಹತ್ಯೆ  

ಕಳೆದುಕೊಳ್ಳದೆ ಏರಬೇಕು ನೀ ನಿತ್ಯ 
ಕೆಡುವವರು ಉಂಟು 
ಗಡಿ ದಾಟುವವರೆಗೆ
ಹಿಡಿ ಗಟ್ಟಿ ಅದೆ ಸತ್ಯ.

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...