Sunday, May 8, 2022

* ಅವ್ವ *

ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು 

* ಅವ್ವ *

ಭವದೊಳಗೆ ಮಿಗಿಲುಂಟೆ 
ಮರೆತು ಸಾಗುವುದುಂಟೆ 
ಜಗದೊಳಗೆ ಅವ್ವನ ಪದಕೆ 
ಸರಿಸಾಟಿ ಯುಂಟೆ ? !!

ಸಾಕಿ ಸಲುಹಿ ಪೊರೆದವಳು 
ತನ್ನಿಷ್ಟಗಳ ಮರೆತವಳು 
ಕಷ್ಟಗಳ ಮಳೆ ಸುರಿಯೆ 
ಸಂಸಾರ ಜೀಕಿದವಳು ಈ ಅವ್ವ!!

ಇಕ್ಕಳದಲ್ಲಿ ಕುಳಿತವಳು
ನಕ್ಕಂತೆ ನಟಿಸಿದವಳು
ತನ್ನ ರಕ್ತದ ಬೆಳೆಗೆ ಕಣ್ಣಾಗಿ
ಹಣ್ಣು ನೀಡಿದವಳು ಈ ಅವ್ವ!!

ಕಕ್ಕಸವ ಸರಸಿದವಳು
ಕಕ್ಕಿದ್ದು ಒರೆಸಿದವಳು 
ಬಿಕ್ಕಳಿಸಿದರೆ ರಮಿಸಿದಳು
ಮಿಕ್ಕಿದ್ದು ಸೇವಿಸಿ ನಕ್ಕವಳು ಈ ಅವ್ವ !!

ಅಪ್ಪನಿಗೆ ಹೆಗಲಾಗಿ 
ಮಕ್ಕಳಿಗೆ ನೊಗವಾಗಿ
ಚಕ್ಕಡಿಯ ಎಳೆದವಳು 
ಸೊಕ್ಕಿದವರಿಗೂ ಬಾಗಿದಳು ಈ ಅವ್ವ !!

ಸುಕ್ಕುಗಟ್ಟಿದ ದೇಹ
ಮಿಕ್ಕಿದರೂ ದುಡಿಯುತಿಹಳು
ಚಿಕ್ಕ ಪ್ರೀತಿಗೂ ಹಿಗ್ಗುವಳು
ಪಕ್ಕದ ದೇವರಿಗಿಂತ ಮಿಗಿಲು ಈ ಅವ್ವ!!

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...