Sunday, September 25, 2022

ನಂಬುಗೆಗಳ ಉದ್ದೇಶ ಒಳ್ಳೆಯದೆ ಇದ್ದರೆ ಬೇಡ ಎನ್ನಲಾದೀತೆ ?


        ಇಂದು ಮಧ್ಯಾಹ್ನ ಲಗು ಬಗೆಯಿಂದ  ನನ್ನ ಹೊಲದ ಕಡೆ ನಡೆದೆ ರವಿವಾರ ರಜೆ ತಾನೆ.  ಅಮವಾಸ್ಯೆ ಬೇರೆ, ಹೊಲದಲ್ಲೇನು ಸಂತೋಷ ತರುವ ಬೆಳೆಯೇನು ಇಲ್ಲ. ಮಳೆರಾಯ ಎಲ್ಲಾ ಗುಡಿಸಿ ಗುಂಡಿಗೆ ಹಾಕಿದ್ದಾನೆ. ಆದರೇನು ರವಿವಾರಕ್ಕೊಮ್ಮೆ ಹೊಲ ನೋಡದಿದ್ದರೇ ಏನೋ ಕಳೆದುಕೊಂಡ ಅನುಭವ. ಭೂತಾಯಿನ್ನು ನೋಡುವುದೇ ಒಂದು ಭಾಗ್ಯ. ರೆಡಿಯಾಗಿದ್ದೆ ತಡ ಹಿಂದೆ ಅರ್ಧಾಂಗಿಯೂ ರಡಿ ಏಕೆಂದರೆ ನನ್ನೂರಿನ ಮನೆಯಲ್ಲಿ ಅಮವಾಸ್ಯೆ ಸ್ವಚ್ಚತಾ ಕಾರ್ಯ ನಡೆಯಬೇಕು ನೋಡಿ ! ಮನೆಯ ದೇವರುಗಳನ್ನು ಹಿರಿಯರ ಆತ್ಮಕ್ಕೆ ಶಾಂತಿ ಮಾಡಬೇಕು ತಾನೇ ? ದೇವರನ್ನು ಶಾಂತಮಾಡುವುದು ಎಂದರೇನು ? ನಾವು ಶಾಂತಿಯನ್ನು ಆನುಭವಿಸುವದು ಎಂದರ್ಥ. ಅದಕ್ಕೆ ಶಂಕರಾಚಾರ್ಯರು ಹೇಳದ್ದು "ನಾನೇ ದೇವರು" ಎಂದು   ಆತ್ಮ ಬೇರೆ ಅಲ್ಲ ದೇವರು ಬೇರೆ ಅಲ್ಲ. ಆತ್ಮ ನನ್ನಲ್ಲಿ ಇದೆ ಎಂದರೆ . ನನ್ನಲ್ಲಯೇ ದೇವರಿದ್ದಾನೆ ಎಂದರು. ಅದಕ್ಕೆ"ಅಹಂ ಬ್ರಹ್ಮಾಷ್ಮೀ ' ಎಂದದ್ದು  ಇದನ್ನೆ ಅವರು ಅದ್ವೈತ ಸಿದ್ದಾಂತ ಎಂದು ಕರೆದರು ಅಂದರೆ ಎರಡಲ್ಲದ್ದು ಎಂದು ಅರ್ಥ. ಇರಲಿ ಆರೇಳು ಕಿ ಮೀ ಹತ್ತು ,ಹದಿನೈದು ನಿಮಿಷಗಳಲ್ಲಿ ಶರವೇಗದ ಸ್ಪ್ಲೆಂಡರ ಬೈಕು ಹುಟ್ಟಿ ಬೆಳೆದ ಮನೆಗೆ ತಂದು ನಿಲ್ಲಿಸಿತು. ಮನೆಯಲ್ಲೇನಿದೆ !! ಅದು ಮಹಿಳೆಯರ ಹೊಕ್ಕ ಮೇಲೆಯೇ ಸ್ವರ್ಗ ಅಲ್ಲಿಯವರೆಗೆ ಅದು ನಾಲ್ಕು ಗೋಡೆಗಳು ಇರುವ ಅಘೋಷಿತ ಜೈಲೆ ಸರಿ. ಮಡದಿಯ ಕೈಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ಹೊಲದ ದಾರಿ ಹಿಡಿದೆ ಹೊಲ ತಲುಪಿದ್ದೆ ತಡ ಹೊಲದ ತುಂಬಾ ಜಿನುಗುತ್ತಾ ಹರಿಯುವ ಬುಗ್ಗೆಗಳು, ಕಾಲು ಇಟ್ಟ ಕಡೆ  ಕೈಲಾಸ ಅದು ಮನಕಾಲು ತಲುಪಿ ಕಿತ್ತುನಡೆಯಲು  ಹೆತ್ತತಾಯಿನ್ನು ನೆನೆಯಬೇಕು  ಅದು ಹೊಲವಲ್ಲ ಮಲೆನಾಡು ಮೈಮೇಲೆಳೆದುಕೊಂಡ  ಮಲಗಿದ ಮಾರಿ ಮುತ್ತು, ನಿಟ್ಟುಸಿರು ಬಿಟ್ಟು ನಡುಹೊಲಕ್ಕೆ ಬಂದೆ, ಮಳೆಗೂ ಮಾನವನನ್ನು ಮಣಿಸುವ ಶಕ್ತಿ ಇದೆ ಎಂದು ಅರ್ಥವಾಗಿದ್ದು ಆವಾಗಲೆ. ಮಡಚಿ ಮಲಗಿದ ಗೋವಿನ ಜೋಳ. ನೀರು ಕುಡಿಯುತ್ತಿರುವ ಮುಸುಕಿನ ತೆನೆ. ಪಕ್ಕದಲ್ಲಿಯೇ ಗೊರಲಿಗೆ ಆಹಾರವಾದ ಮುಸುಕಿನ ಜೋಳ. ಏನು ಮಾಡುವುದು, ಮಾನಸೂನೊಡನೆ ಜೂಜಾಟ ಆಂದರೆ ಇದೆ ಅಲ್ಲವೆ ?. ಇರಲಿ ನನ್ನ ಮುಖ್ಯವಾದ ವಿಷಯ ಅದಲ್ಲ. ಧನಿವಾರಿಸಲು ಬನ್ನಿ ಗಿಡದ ಕೆಳಗೆ ಒರಗಿದ್ದೇ ತಡ ಮೂರು ದಾಂಡಿಗರು ಎರಡು ಚಿಕ್ಕ ಹುಡುಗರು ಎರಡು ಆಳೆತ್ತರದ ಸಸಿಯೊಂದಿಗೆ ಹಾಜರು .ಇವರು ಗುರುತು ಅಸ್ಪಷ್ಟ ಆದರೆ ನನ್ನೂರಿನ ಲಂಬಾಣಿ ಸಹೋದರರೆಂದು ಗುರುತು ಹಿಡಿಯಲು ಬಹು ವೇಳೆ ಏನು ಹಿಡಿಯಲಿಲ್ಲ ಇವರೆಲ್ಲೋ ಸಸಿ ನೆಡಲು ಹೊರಟಿರುವುದು ಎಂದು ತಿಳಿದೆ. "ಸರ್ ನಾವು ತಪ್ಪು ಮಾಡಿದ್ದೆವು ಅಂದರೆ... ತಪ್ಪೇನು ಅಲ್ಲ .ನಿಮ್ಮ ತಮ್ಮ ಮನೆ ಕಟ್ಟಿಸುವ ಸಲುವಾಗಿ ಗಿಡ ಕಡಿಸಿದ್ದ ಆವಾಗ ಬನ್ನಿಗಿಡಕ್ಕೆ ಹೊಂದಿಕೊಂಡ ನಿಮ್ಮ ದೇವರ ಬೇವಿನ ಗಿಡ ಕಡಿಯಬಾರದಿತ್ತು ಆದರೆ ನಿಮ್ಮ ತಮ್ಮನ ಮಾತಿಗೆ ಕಡಿದಿದ್ದೇವೆ ಅದಕ್ಕಾಗಿ ನಾವು ಪಡಬಾರದ ಕಷ್ಟ ಅನುಭವಿಸಿದ್ದೇವೆ ಅದರ ಪಶ್ಚಾತ್ತಾಪದ ಸಲುವಾಗಿ ನಿಮ್ಮ ಹೊಲದಲ್ಲಿ ಎರಡು ಗಿಡ ನೀಡಬೇಕೆಂದು ಹೇಳಿದ್ದಾರೆ ಅದಕ್ಕಾಗಿ ಇವತ್ತು ಆಡಗಲ್ಲಿನ ನರ್ಸರಿಯಿಂದ ಎರಡು ಗಿಡ ತಂದಿದ್ದೇವೆ ಇವತ್ತು ರವಿವಾರ ಅಮವಾಸ್ಯೆ ನಿಮ್ಮ ಹೊಲದಲ್ಲ ನೆಟ್ಟರೆ ತಪ್ಪೇನೂ ಇಲ್ಲವಲ್ಲ ಸರ್, ಎಂದರು . ಅದಕ್ಕೇನು... ನಾವೆ ಗಿಡತಂದು ನೆಡಲು ನೂರಾರು ರೂಪಾಯಿ ಖರ್ಚು ಮಾಡಬೇಕು ಆದರೆ ನೀವಾಗಲೆ ನಮ್ಮಹೊಲದಲ್ಲಿ ಗಿಡ ನೆಡುತ್ತೀರಿ ಎಂದರೆ ಯಾರು ತಾನೆ ಬೇಡ ಎಂದಾರು ? ಆದರೆ ಒಂದು ಖಂಡಿಷನ್ ಏನೆಂದರೆ ಒಂದು ಗಿಡ ಈ ದೇವರ ಗಿಡದ ಸಮೀಪ ನೆಡಬೇಕು ಇನ್ನೊಂದು ನಾನು ಹೇಳೋ ಜಾಗದಲ್ಲಿ ನೆಡಬೇಕು ಎಂದೆ.  ಆಗಲಿ ಸರ್ ಈ ಒಂದು ಗಿಡ ನೆಡುವದರಿಂದ  ಬನ್ನಿ ಮಹಾಂಕಾಳಿ ಸಂತೃಪ್ತಿಯಾದರೆ ಅಷ್ಟೆ ಸಾಕು ಎನ್ನಬೇಕೆ ? ಅವರ ನಿಷ್ಕಲ್ಮಶವಾದ ಭಾವಕ್ಕೆ ಒಂದು ಕಡೆ ಅಯ್ಯೋ ಎನ್ನಿಸಿದರೂ ಅವರ ಮಗುವಿನಂತ ನಿಷ್ಕಪಟವಾದ  ಮನಸ್ಸಿಗೆ  ನನ್ನ ಹೃದಯ ಹೂವಿನಂತೆ ಕರಗಿತು. ಅವರ ನಂಬುಗೆಯು, ಅದು ಸರಿಯೊ ತಪ್ಪೊ ಅದು ನನಗೆ ಚರ್ಚಿಸುವ ವಿಷಯವಲ್ಲ ಆದರೆ ಅವರ ಉದ್ದೇಶ ಅಪ್ಫಟ ಪ್ರಕೃತಿ ಪ್ರೇಮದ ಅನಾವರಣ ನಂಬುಗೆಯು ಅದು ಏನೆ ಇರಲಿ ಉದ್ದೇಶ ಮತ್ತು ಕಾರ್ಯ ಅದು ಸಮಾಜ ಮುಖಿಯಾಗಿದ್ದರೆ ಒಳ್ಳೆಯದೆ ಅಲ್ಲವೆ ?

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...