Saturday, October 1, 2022

* ಬಟ್ಟೆ ಇದ್ದೂ ಬೆತ್ತಲು.*.

ತಾತ ಸತ್ಯಕ್ಕಾಗಿ ನೀ ಮಾಡಿದೆ
ಆಗ್ರಹ.
ಅದರೆ ಹಿಡಿದಿದೆಯಲ್ಲ ಈಗ
ಗ್ರಹಣ.
ತಾತ ನೀನು ಹೇಳಿದೆ ಮಾಡಬೇಡರಿ 
ನನ್ನ ಮೂರ್ತಿ  
ನನಗಲ್ಲ ಅದು ಕೀರ್ತಿ, 
ಮರತೆವಲ್ಲ ಪೂರ್ತಿ. 
ಆದರೆ ನಿನ್ನ ತತ್ವಗಳಿಗೆ 
ಇನ್ನೂ 
ಬಂದಿಲ್ಲ ಸರತಿ.
ಭಾಷಣದಲ್ಲಿ ಅವುಗಳಿಗೇನಿಲ್ಲ 
ಕೊರತೆ.
ಈಗ ಸುಳ್ಳಿನೊಂದಿಗೆ ನಡೆದಿದೆ 
ಸರಸ .
ಸತ್ಯದೊಂದಿಗೆ ಸದಾ 
ವಿರಸ.  
ತತ್ವ ಪಾಲಿಸಲು ಎಲ್ಲರಿಗೂ 
ಬಹು ಆಯಾಸ !
ತಾತ ಅಪ್ಪಿ ತಪ್ಪಿ ನೀ ಮಾಡಬೇಡ 
ಬರುವ ಸಾಹಸ .
ಬಂದರೆ ನೀ ನೋಡತಿ ಆಂಗ್ಲರ 
ವಂಶ 
ಆಪೋಷಣಿ ಮಾಡಿದ್ದಾರೆ 
ನಿನ್ನ ಸತ್ಯ ಅಹಿಂಸಾ. 
ಭಾರತೀಯರ ಬಟ್ಟೆಗಿರುವ 
ಬಡತನ  ನೀನರಿತೆ 
ನೀನಾದೆ ಅರಬೆತ್ತಲೆ
ಈಗ ನಮಗಾಗಿದೆ 
ಕತ್ತಲೆ ...
ಹೀಗಾಗಿ ನಾವು
ಬಟ್ಟೆ ಇದ್ದು ಬೆತ್ತಲೆ.

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...