Thursday, December 29, 2022

* ಕನ್ನಡಕ್ಕೊಬ್ಬನೆ ಕುವೆಂಪು *

ರಾಷ್ಟ್ರ ಕವಿ ಕುವೆಂಪು ರವರ ಜಯಂತಿ ಪ್ರಯುಕ್ತ ಮಹಾನ ಕವಿ, ರಸಋಷಿಗೆ ಕನ್ನಡಿಗರ ಪ್ರೀತಿಯ ನುಡಿನಮನ.


ಕನ್ನಡಕ್ಕೊಬ್ಬ ಕುವೆಂಪು ಸಿಗದಿದ್ದರೆ ಮಲೆನಾಡಿನ ಸೋಬಗೊಂದು ಮನೆ ಮನೆಗಳಲ್ಲಿ ಮಾಧುರ್ಯ 
ಅಲೆಯಾಗಿ ಕಂಪು ಹರಡುತ್ತಿತ್ತೆನೋ ? । ಪ।

ಆ ಪಂಪ, ಪೊನ್ನ ,ಜನ್ನ  ರನ್ನರನ್ನು ಬಣ್ಣಿಸುವ
ಎನ್ನ ಕುಲಕೋಟಿಯ ತನ್ನ ತನವನ 
ಬಡಿದೆಬ್ಬಿಸುವ ರಸಗವಳ ಸಿಗುತ್ತಿತ್ತೇನೋ?॥
 
ಆ ಗಿರಿಕಂದರದ ಕೋಗಿಲೆಗಳಿಂಚರ ಕನ್ನಡಿಗನ ಸ್ವಾಭಿಮಾನದ ಆಲೆಯಾಗಿ ಬಲೆಯಾಗಿ
ಗಂಧರ್ವ ಲೋಕ ಸೃಷ್ಟಿಯಾಗುತ್ತಿತ್ತೇನೋ ?॥

ಆ ಶ್ರೀಗಂಧದ ಮರ ಮೈಸೂರು 
ಅರಮನೆಯ ದಸರೆಯಾಗಿ ದಶ ದಿಕ್ಕುಗಳಿಗೆ ಹೊಸ 
ಸುಗಂಧ ಪರಿಮಳ ಸೂಸುತ್ತಿತ್ತೇನೋ?॥

ಆ ಮತ ಈ ಮತ ಭಿನ್ನ ಮತಗಳ ಭೀತಿ 
ಸಾವಿರ ಪಂಥಗಳಲಿ ಸೇರಿ ಮನುಜ 
ಮತದಲ್ಲಿ ಲೀನವಾಗುತ್ತಿತ್ತೇನೋ ?॥

ಆ ಕವಿಶೈಲದೊಂದೊಂದು ನುಡಿ
ಕನ್ನಡಿಗರ ಹೆಮ್ಮೆಯ ಕಾವ್ಯವಾಗಿ 
ಅರಸಿಕನೂ ಬೆರಗಾಗುವ ಹೊಸ 
ಮನ್ವಂತರ ಖುಷಿ ನೀಡುತ್ತಿತ್ತೇನೋ.?॥

ಆ ಕ್ಲಾಸಿಕಲ್ ಯುಗದ ಕನ್ನಡದ ಕಂಪು 
ಈ ಸವಿಗನ್ನಡದ ಆದಿ ಜ್ಞಾನಪೀಠ ಪ್ರಶಸ್ತಿ 
ಭುವನೇಶ್ವರಿ ಕೊರಳ ಮಾಲೆಯಾಗಿ 
ಭುವನದಲ್ಲಿ ಶೋಭಿಸುತ್ತಿತ್ತೇನೋ.?

ಆ ವೈಚಾರಿಕ ನೆಲೆಯ ಸದಭಿವೃಚಿಯ ಸಾಹಿತ್ಯ
ಅಂಧಕಾರವ ಮುರಿದು ಸೈದ್ಧಾಂತಿಕ ಗಾಳಿ
ಅಧಮನ ಅನೀತಿಯ ಆಲಿಂಗನ ಬಿಡಿಸಿ
ಸುಧಾಮನರಮನೆ ಮಾಡುತ್ತಿತ್ತೇನೋ.?

ಕನ್ನಡಕ್ಕೊಬ್ಬ ಕುವೆಂಪು ಸಿಗದಿದ್ದರೆ ಮಲೆನಾಡಿನ ಸೋಬಗೊಂದು ಮನೆ ಮನೆಗಳಲ್ಲಿ 
ಮಾಧುರ್ಯ ಅಲೆಯಾಗಿ ಕಂಪು ಹರಡುತ್ತಿತ್ತೆನೋ ? । ಪ।

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...