Monday, February 6, 2023

* ಕುದಿ ಮೌನ *

ಎತ್ತರಕ್ಕೇರಿದವನಿಗೆ ಗೊತ್ತು
ಹತ್ತು ಹನ್ನೊಂದು ತನ್ನೊಳಗೆ ಸುತ್ತಿ ಸುಳಿವ 
ಕತ್ತು ಹಿಚುಕುವ ಹಳೆಯ ಕೊಳೆತ ಹುಳುಕುಗಳು ಎತ್ತರಕ್ಕೇರಿಸಿದ ಜನ ನೆತ್ತಿಯಲಿಟ್ಟು ತೂಗುತಿರುವರಲ್ಲಾ! 

ಮತ್ತೆ ಇಳಿಯಲು ಮನಸ್ಸಿಲ್ಲ 
ಇಳಿದರೆ ಬರಿ ತೋಳಗಳೆ ಎಲ್ಲಾ
ಉಪ್ಪರಿಗೆಗಂಟಿ ತೆಪ್ಪಗಿರಲುಂಟೆ 
ಕಪ್ಪ ನೀಡಿ  ಬೆಪ್ಪನಂತಿರಬೇಕು !

ಮುಳ್ಳುಗಳಿವೆ ಕುಳಿತ ಜಾಗದ ತುಂಬಾ
ಚುಚ್ಚುವವು ಎಡಬಲ ತಪ್ಪಿದರೆ ನೇಣುಗಂಬಾ
ತುಟಿ ಬಿಚ್ಚಲೊಲ್ಲ ಹುಚ್ಚು ಹಿಡಿದಿದೆ , 
ನೆಚ್ಚಿಸಲು ಬಲವಿಲ್ಲ ತಿರುಗುತಿಹನು !

ಜೋಡಿಸಿದ ಕರ ಅಗಲಿಸಲೊಲ್ಲ 
ಕೃತಕ ನಗೆ ಬೀರಿ ಏರುತಿಹನು ಸುಳ್ಳಿನ ತೇರು 
ಎಳೆಯುವುದೊಂದೆ ಕಳ್ಳ ಮಳ್ಳರಿಗೆ ಚಂದ 
ಮತ್ತೆ  ನಿಲ್ಲಿಸುವರು ನಿಂತ ಜಾಗದಲ್ಲಿ ತಂದು!

ಕರಗುವ ಹಿಮದಂತ ಹಿರಿದಾಸನವದು 
ಉರಿಯುತಿದೆ ನರಮಂಡಲ, 
ಮರೆಯಲಾಗದು ಸುತ್ತಲಾವರಿಸಿದೆ ಕೊಳಕಮಂಡಲ 
ಸಾಯಲು ಬಿಡದೆ ಬದುಕಲು ಬಿಡದೆ!

ಹೊರಗೂ ಇಲ್ಲದೆ ಒಳಗೊ ಇಲ್ಲದೆ  
ಅರಳವ ಕನಸಿನೊಂದಿಗೆ ಸರಸ
ಜೇಡ ಕಟ್ಟಿದ ಮನೆಯಲ್ಲಿಂದು 
ಬಿಡದೆ ಕಾಡುತಿದೆ ಕುದಿ ಮೌನ!

 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...