Wednesday, February 22, 2023

* ದೇವರು ನಡೆದಾಡಿದ *



ನಡೆದಾಡಿದಾ ದೇವರು 
ಸಿದ್ಧೇಶ್ವರ ಶ್ರೀಯಾಗಿ  
ಪಡೆದು ಕಳೆದುಕೊಂಡೆವು
ನಿರಾಶೆಯಾಗಿ,
ನೀ ನಮ್ಮೆಲ್ಲರ ತಂದೆ
ಕಾಯುತಿರುವೆವು ಅನಾಥವಾಗಿ ॥

ನಮ್ಮೆಲ್ಲರ ಹೃದಯ ಪಟಲದಲ್ಲರಳಿ 
ಸುಮ್ಮನೇ ತೆರಳಿದೆ ಹಮ್ಮೀರ,
ಒಮ್ಮೆ ಬಂದು ನೋಡು
ನೀಮ್ನರು ಕಾಯುತಿರುವೆವು ನಿಮಗಾಗಿ ॥

ಆಶೆಯೆಂಬ ಹೇಸಿಗೆಗಂಟಿ 
ಮೋಸ ಹೋದ ಮನಕೆ 
ಹೊಸದಾರಿ ತೋರಿದೆ ಸ್ವೇತ ಮುನಿ 
ಮಾನವತ್ವದ ನೆರಳಲ್ಲಾದೆ ದೈವತ್ವದ ಗಣಿ॥

ಆಧ್ಯಾತ್ಮಿಕ ಅರಮನೆಯ ದೊರೆಯೇ 
ನಿರವ ಕಾಣುತಿದೆ ಗುರುಮುನಿ 
ನೀ ತುಳಿದ ಹಾದಿಯಲ್ಲಿ ಜ್ಞಾನಕ್ಕೇನು ಬರ ಧನಿ॥

ಸ್ವೇತ ಬಟ್ಟೆಯ ಸಂತ, ಜಾತಿ ಎಣಿಸಲಿಲ್ಲ .
ಮರ್ಕಟ ಮನಕೆ ಸೋತು ನಡೆಯಲಿಲ್ಲ .
ಸರ್ವರ ಹಿತವನ್ನೆ ಬಯಸಿದೆ ಇಲ್ಲೆಲ್ಲಾ॥

ಆಧ್ಯಾತ್ಮದ ಪರಮಶಿಖರ, 
ಸುಜ್ಞಾನದ ದಿವ್ಯ ಜ್ಯೋತಿ 
ಭೌತಿಕವಾಗಿ ಆರಿದರೇನು? 
ಬೆಳಗಿದೆ ಜಗವೆಲ್ಲ 
ಸೂತಕ ಹಿಡಿದಿದೆ 
ಅನುದಿನ ನಮಗೆಲ್ಲ॥

ಹಣ ಮಾಡಲು ಹೆಣಗಲಿಲ್ಲ
ಹಾಕಿದ ಅರಿವಿಗೆ ಕಿಸೆ ಮೊದಲೆ ಇಲ್ಲ
ಹಾರ ತುರಾಯಿಗೆ ಹಿಗ್ಗಿದವರಲ್ಲ ।
ಬಗ್ಗಿ ತೇರು ಎಳೆಯುವವರ ಮೇಲೆ ಹತ್ತಲೆ ಇಲ್ಲ  
ಸುತ್ತಲೂ ನಿನ್ನಂತಹವರನ್ನು 
ಹುಡುಕಿದೆ ಇನ್ನೂ ಸಿಕ್ಕೆ ಇಲ್ಲ ॥

ಬಸನಗೌಡ ಗೌಡರ ಉಪನ್ಯಾಸಕರು ಗುಳೇದಗುಡ್ಡ

    cell no 9480385494

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...