Wednesday, March 8, 2023

ವಿದ್ಯಾರ್ಥಿಗಳಿಗೆ ಕಿವಿ ಮಾತುಗಳು

ಆತ್ಮೀಯ ವಿದ್ಯಾರ್ಥಿಗಳೆ, ದ್ವಿತೀಯ ಪಿಯುಸಿ ಪರೀಕ್ಷೆ 2023, ಇದು ಈ ವರ್ಷದ ಒಂದು ಸಹಜ ಚಟುವಟಿಕೆ ಈಗಾಗಲೆ ಎರಡು ಕಿರು ಪರೀಕ್ಷೆ, ಅರ್ಧ ವಾರ್ಷಿಕ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಎದುರಿಸಿದಂತೆ ಇದೂ ಒಂದು ಪರೀಕ್ಷೆ ಅಷ್ಟೇ. ಅತಿಯಾದ ನಿರೀಕ್ಷೆ ಏನು ಅವಶ್ಯಕತೆ ಇಲ್ಲ ನಿಮ್ಮ ಷ್ಟಕ್ಕೆ ನಿವು ಬರೆದರೆ ಅದು ತನ್ನಷ್ಟಕ್ಕೆ  ತಾನು ಫಲಿತಾಂಶ ನೆರಳಿನಂತೆ ಹಿಂಬಾಲಿಸುತ್ತದೆ ಅದರ ಬಗ್ಗೆ ನಿಮಗೆ ಚಿಂತೆ ಬೇಡ. ಇದು ಜೀವನದ ಅಂತಿಮವೂ ಅಲ್ಲ.ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸುವದೊಂದೆ ನಿಮ್ಮ ಕರ್ತವ್ಯ ಅಲ್ಲಿರುವ ಅಧಿಕಾರಿಗಳು ಶಿಕ್ಷಕರು ತಮ್ಮ ತಮ್ಮ ಕೆಲಸ ತಾವು ನಿರ್ವಹಿಸುತ್ತಿರುತ್ತಾರೆ ನೀವು ನಿಮ್ಮ ಕೆಲಸ ನಿರ್ವಹಿಸುತ್ತಿರುತ್ತೀರಿ ಅಷ್ಟೇ ಮನೆಯಿಂದ ಬೇಗ ಬಿಡಿ ಹತ್ತು ನಿಮಿಷ ಬೇಗನೆ ಹೋಗಿ ಕುಳತರೆ ನಿಮ್ಮದೇನು ನಷ್ಟವಾಗದು ಆವಾಗ ಒಂದು ಕಡೆ ಕುಳಿತು ಆ ದಿನದ ವಿಷಯದ ಕುರಿತು ಮೆಲಕು ಹಾಕಬಹುದು. ಓದುವ ಅವಶ್ಯಕತೆ ಇಲ್ಲ ಇಗಾಗಲೆ ಸಾಕಷ್ಟು ಓದಿದ್ದೀರಿ ಗಡಿಬಿಡಿಯಲ್ಲಿ ಓದಿದ್ದು ತಲೆಯಲ್ಲಿ ಉಳಿಯಲಾರದು ನಿರಮ್ಮಳವಾಗಿ, ಆದರೆ ಲೇಟಾಗಿ ಮನೆ ಬಿಟ್ಟು ಪರೀಕ್ಷೆ ಅವಧಿ ಸಮೀಪಿಸಿತು ಎಂದು ಉದ್ವೇಗಕ್ಕೆ ಒಳಗಾದರೆ ಖಂಡಿತವಾಗಿಯೂ ಆ ಹಿಂಸೆ ನಮ್ಮ ವೈರಿಗೂ ಬೇಡ ,ನೀವು ಮೌಲ್ಯಮಾಪಕರು ನೆಚ್ಚುವಂತೆ ಬರೆಯಲು ಆಗದೆ ಇರಬಹುದು ಸ್ನೇಹಿತರೆ, ಸಮಾನ ಮನಸ್ಕ ಸ್ನೇಹಿತರು ಇದ್ದರೆ ಬೇಕಾದರೆ ಪ್ರಮಖ ಪರಕಲ್ಪನೆಗಳನ್ನು ಚರ್ಚಿಸಬಹುದು ಆದರೆ ಅದು ಅತಿಯಾಗಿ ಬೇಡ ಸಾಧ್ಯವಾದರೆ ಮನಸ್ಸು ಪ್ರಶಸ್ತವಾಗಿರಲಿ. ಆರೋಗ್ಯದ ಕಡೆ ಗಮನವಿರಲಿ ಅತಿಯಾದ ಊಟವೂ ಬೇಡ ಉಪವಾಸವೂ ಬೇಡ ಉದರಕ್ಕೆ ತೊಂದರೆಯಾದರೆ ಅದು ಮದುಳಿನ ಮೇಲೆ ಸವಾರಿ ಮಾಡಬಹುದು ನೀವು ನಿಂತಿರುವುದು ಅದೆ ಮೆದುಳಿನ ಮೇಲೆ ಅಲ್ಲವೆ ? ಹಾಗಾಗಿ ಆರೋಗ್ಯದ ಕಡೆ ಗಮನವಿರಲಿ ಸಾಧ್ಯವಾದರೆ ನೀವು ನಂಬಿರುವ ದೇವರನ್ನು ಕ್ಷಣ ನೆನೆದು, ತಂದೆ ತಾಯಿಯ ಆಶೀರ್ವಾದ ಪಡೆದು ಸಾಗಿ ಸಾಧನೆ ನಿಮ್ಮ ಹಿಂದೆ ಬರದೆ ಹೋದರೆ ಹೇಳಿ. ಖಂಡಿತವಾಗಿಯೂ ಎಲ್ಲರಿಗೂ ಯಶಸ್ಸು ಸಿಗುತ್ತದೆ.
ದ್ವಿತೀಯ ಪಿಯುಸಿ ಬರೆಯಲು ಸಜ್ಜಾಗಿರುವ ನನ್ನಲ್ಲೆ ವಿದ್ಯಾರ್ಥಿಗಳಿಗೆ ಶುಭವಾಗಲಿ.👍🏻👍🏻🙏🙏

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...