Sunday, November 12, 2023

ಆಧುನಿಕ

ಆಧುನಿಕ

ಧನಿವರಿಯದೆ ದುಡಿದು ಆದ 
ಈ ಧನಿಕ , ಆಧುನಿಕ 
ದಿನವಿಲ್ಲ ತನಿದು ಮನ ಅರಳಿ 
ಗುಣ ಹೂವಾಗಲು,
ವನವಾಗಿದೆ ಬರಿ ಕೊರಡಿಲ್ಲಿ॥
 
ಮನರಂಜನೆ ಇಂದು 
ಮನೆಯ ಬಾಗಿಲು ಮುಂದೆ 
ಮನ ಬಾಗಲು ದಿನವಿಲ್ಲ 
ಹಣವೊಂದೆ ಹರನಿಲ್ಲಿ 
ಗುಣ ಕೇಳಲಾರಿಲ್ಲ ಜಗದಲ್ಲಿ॥

ಕಾಯದೆ ವಿಧಿಯಿಲ್ಲ 
ಕರ್ಮ ಕಟ್ಟಿದ ಬುತ್ತಿ
ಕೈಚಳಕ ಮಾಡಲಿದು ಜಾದುವಲ್ಲ 
ಬದ್ದತೆ ಬಳಿಯಿರಲು ವಿದ್ಯೆ
ಸದ್ದು ಮಾಡದೆ ಸನಿಹದಲ್ಲಿ.॥

ಸಂಬಂಧ ಸಹಾಯಕಿರುವ 
ಅನುಬಂಧ ಬೆಳೆಸಿದರೆ ಚಂದ
ಸಡಿಲಾದರೆ ಗಡಿ ದೂರ 
ಪಡೆಯಲೇನದು ಕಡವೆ ?
ನೀಡಿದಷ್ಟೆ ಪಡೆಯಬೇಕಿಲ್ಲಿ॥

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...