Monday, December 30, 2024

ಸೋಲುತ್ತಿದ್ದೇನೆ.


ಈಗೀಗ ನಾನು ಸೋಲುತ್ತಿದ್ದೇನೆ
ಪ್ರಭಲನಾಗಿರವೆ ಎನ್ನುವ ಸತ್ಯದ ಅರಿವಿದ್ದರೂ,
ಎತ್ತಿ ಕಟ್ಟಿ ಸುತ್ತುವರಿಯುವರೆಂಬ ಅರಿವಾದಾಗ.

ಈಗೀಗ ನಾನು ಸೋಲುತ್ತಿದ್ದೇನೆ.
ಅಧಿಕಾರ ಕೇಂದ್ರೀಕರಿಸುವವರ ಅರಿವಿದ್ದರೂ ,
ಜಗತ್ತು ನಡುಗಿಸಿದ ಹಿಟ್ಲರನ ಆತ್ಮಹತ್ಯೆಯ ಅರಿವಾಗಿ.

ಈಗೀಗ ನಾನು ಸೋಲುತ್ತಿದ್ದೇನೆ
ಚಿಕ್ಕವರೂ ಶೆಟೆದು ನಿಲ್ಲುವ ಸತ್ಯದ ಅರಿವಿದ್ದರೂ,
ನಿಸರ್ಗವೆ ನಿರ್ಣಾಯಕವೆಂದು ತಿಳಿದಾಗ

ಈಗೀಗ ನಾನು ಸೋಲುತ್ತಿದ್ದೇನೆ 
ದೂರದನುಭವದ ಹಿರಿತನವಿದ್ದರೂ, 
ಉಳಿದಿರುವ ದಾರಿ ಚಿಕ್ಕದೆಂದರಿವಾದಾಗ 

ಈಗೀಗ ನಾನು ಸೋಲುತ್ತಿದ್ದೇನೆ
ವಾದದ ಸೋಲಿನ ಅವಮಾನ ಅರಿವಿದ್ದರೂ,
ಗೆದ್ದವರಾರು ಉದ್ದಾರವಾಗಿಲ್ಲವೆಂದು ತಿಳಿದಾಗ 

ಈಗೀಗ ನಾನು ಸೋಲುತ್ತಿದ್ದೇನೆ
ಅನ್ಯಾಯ ಎನ್ನುವ ಸತ್ಯದ ಅರಿವಿದ್ದರೂ,
ನ್ಯಾಯದ ಜಯ ನಿಧಾನವೆಂಬುದರಿವಾಗಿ

ಈಗೀಗ  ನಾನು ಸೋಲುತ್ತಿದ್ದೇನೆ
ದ್ವೇಷದ ಸಂತೆಯಲ್ಲಿ ಪ್ರೀತಿ ದುಭಾರಿಯಾದರೂ,
ಪ್ರೀತಿಗೆ ತಲೆಬಾಗದ ಕ್ರೂರಿಯಾರಿಲ್ಲದಿರುವಾಗ



No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...