Friday, January 3, 2020

MODERN HISTORY


೭.೧. ಆಧುನಿಕ ಭಾರತ : ಭಾರತಕ್ಕೆ ಯುರೋಪಿಯನ್ನರ ಆಗಮನ.


ಪೋರ್ಚಗೀಸರು; ೧೪೯೮ ರಲ್ಲಿ ವಾಸ್ಕೋ-ಡ-ಗಾಮ ಭಾರತಕ್ಕೆ ಜಲಮಾರ್ಗ ಕಂಡು

ಹಿಡಿಯುವದರ ಮೂಲಕ ಯೂರೋಪಿನ್ನರ ವ್ಯಾಪಾರ ಪುನರ್‌ಸ್ಥಾಪಿಸಲ್ಪಟ್ಟತು.

ಭಾರತದಲ್ಲಿ ಮೊದಲ ಪೋರ್ಚಗೀಸರ ಗೌರ‍್ನರ್ ಫ್ರಾನ್ಸಿಸ್-ಡಿ-ಅಲ್ಮಿಡಾ. ಆಲ್ಫೆನ್ಸೊ-ಡಿ-

ಅಲ್ಬುಕರ್ಕ ಬಿಜಾಪೂರದ ಆದಿಲ್ ಷಾಹಿಗಳಿಂದ ಗೋವಾವನ್ನು ಗೆದ್ದುಕೊಂಡನು.

ಯುರೋಪಿಯನ್ನರು

ರಾಜಧಾನಿ ಈಸ್ಟಇಂಡಿಯಾಕ0ಪನಿ ಸ್ಥಾಪನೆ ವ್ಯಾಪಾರಿ ಕೇಂದ್ರಗಳು ಭಾರತದಲ್ಲಿ ನೆಲೆ ನಿಲ್ಲಲಾರದ್ದಕ್ಕೆ ಕಾರಣಗಳು ಪೋರ್ಚಗೀ¸ರು ಗೋವಾ ೧೪೯೮ಆಗಮನ ದೀವ, ದಮನ,ಸಾಲ್ಸಟ್, ಬೇಸಿನ್

೧) ಧಾರ್ಮಿಕ ಮತಾಂಧ ನೀತಿ

೨) ವಿಜಯನಗರದ ಅವನತಿ

ಡಚ್ಚರು ಪುಲಿಕಾಟ ೧೬೦೨ ಮಚಲಿಪಟ್ಟಣ, ಬಲಿಪಟ್ಟಣ,ನಾಗಪಟ್ಟಣ,ಕೊಚ್ಚಿನ್, ೧) ಆಗ್ನೇಯ ಏಷಿಯಾದ್ವೀಪಗಳ ಕಡೆ ಗಮನ ನೀಡಿದ್ದು ಫ್ರೆಂಚರು ಪಾಂಡಿಚೇರಿ ೧೬೬೪ ಸೂರತ್,ಚಂದ್ರನಾಗೂರು, ಮಾಹೆ,ಕಾರೈಕಲ್

೧) ಡೂಪ್ಲೆ ನಂತರದ ಅಧಿಕಾರಿಗಳ ಅಸಮರ್ಥತೆ ಇಂಗ್ಲೀಷರು ಕಲ್ಕತಾ ೧೬೦೦ ಸೂರತ್,ಅಹ್ಮದಾಬಾದ್,ಆಗ್ರಾ, ಮದ್ರಾಸ,ಬ್ರೋಚ್, ಭಾರತದಲ್ಲಿಅಧಿಪತ್ಯೆ ಸ್ಥಾಪನೆ ಮಾಡಿದರು

೭.೨ ಭಾರತದಲ್ಲಿ ಬ್ರಿಟಿಷ ಸಾಮ್ರಾಜ್ಯ ಸ್ಥಾಪನೆ: ಇಂಗ್ಲಿ಼ಷ ಮತ್ತು ಫ್ರೆಂಚರ ನಡುವೆ ಮೂರು ಕರ್ನಾಟಿಕ್ ಯುದ್ದಗಳು

ನಡೆದವು ೧ನೇ ಕರ್ನಾಟಿಕ ಯದ್ದ ಎಕ್ಸ-ಲಾ-ಛಾಪೆಲ್ ೨ನೇ ೩ನೇ ಕರ್ನಾಟಿಕ್ ಯುದ್ದಗಳು ಕ್ರಮವಾಗಿ ಪಾಂಡಿಚೇರಿ ಮತ್ತು ಪ್ಯಾರೀಸ್ ಒಪ್ಪಂದಗಳೊAದಿಗೆ ಮುಕ್ತಾಯಗೊಂಡವು. ಬಂಗಾಲದಲ್ಲಿ ೧೭೫೭ ರಲ್ಲಿ ಪ್ಲಾಸಿ ಕಾಳಗ ಸಿರಾಜ-ಉದ್-ದೌಲ ಮತ್ತು ರಾಬರ್ಟ ಕ್ಲೆöÊವರ ನಡುವೆ ನಡೆಯಿತು ಈ ಕದನವು ಬಂಗಾಳದಲ್ಲಿ ಬ್ರಿಟಿಷರ

ಸಾಮ್ರಾಜ್ಯ ಸ್ಥಾಪನೆಗೆ ಬುನಾದಿ ಹಾಕಿತು, ೧೭೬೪ ರಲ್ಲಿ ನಡೆದ ಬಕ್ಸಾರ ಕಾಳಗ ಬಂಗಾಳದಮೇಲೆ ಇಂಗ್ಲಿಷರ ಪ್ರಾಬಲ್ಯವನ್ನು ಸ್ಥಿರಗೊಳಿತು.ಹೈದರಾಲಿ ಮತ್ತು ಬ್ರಿಟಿಷರ ನಡುವೆ ೧ನೇ ಆಂಗ್ಲೋ-ಮ್ಯಸೂರ ಯುದ್ದ ನಡೆದು ಮದ್ರಾಸ ಒಪ್ಪಂದದೊAದಿಗೆ ೨ನೇ ಆಂಗ್ಲೋ-ಮೈಸೂರು ಯುದ್ಧ ಮಂಗಳೂರು ಒಪ್ಪಂದದೊAದಿಗೆ ೩ನೇಆಂಗ್ಲೋ-ಮೈಸೂರು ಯುದ್ಧಮ್ಯಸೂರು ಹುಲಿ ಎಂದು ಕರೆಯಿಸಿಕೊಂಡಿರುವ ಟಿಪ್ಪು ಮತ್ತು ಬ್ರಿಟಿಷರ ನಡುವೆ

ನಡೆದು ಇದರಲ್ಲಿ ಟಿಪ್ಪು ಸೋತಾಗ ಶ್ರೀರಂಗಪಟ್ಟಣ ಒಪ್ಪಂದದೊ0ದಿಗೆ ಯುದ್ದಮುಕ್ತಾಯವಾಯಿತು. ಈ ಒಪ್ಪಂದದ ಕರಾರುಗಳೆಂದರೆ

ಟಿಪ್ಪು ತನ್ನ ಅರ್ಧ ರಾಜ್ಯಬಿಟ್ಟು ಕೊಡಬೇಕಾಯಿತಲ್ಲದೆ ಯುದ್ಧ ಪರಿಹಾರಕ್ಕಾಗಿ ೩೩೦ ಲಕ್ಷ ರೂಪಾಯಿಗಳನ್ನು

ಕೊಡಬೇಕಾಯಿತು.

ಯುದ್ಧ ಪರಿಹಾರವನ್ನು ಪಾವತಿಸುವವರೆಗೆ ತನ್ನ ಇಬ್ಬರುಮಕ್ಕಳನ್ನು ಒತ್ತೆಯಾಳಾಗಿ ಇಡಬೇಕಾಯಿತು. ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು ಲಾರ್ಡ ವೆಲ್ಲೆಸಿ.್ಲ ಈ ಪದ್ಧತಿಗೆ ಒಳಗಾದ ಮೊದಲ ರಾಜನೆಂದರೆ ಹೈದರಾಬಾದಿನ ನಿಜಾಮ.. ಈ ಪದ್ದತಿಗೆ ಒಳಗಾದ ಇನ್ನುಳಿದ ಭಾರತೀಯ ರಾಜ್ಯಗಳೆಂದರೆ ತಿರುವಾಂಕೂರು, ಔದ್, ಬರೋಡಾ,ಜೈಪುರ. ಟಿಪ್ಪವಿನ ಮೇಲೆ ಇದನ್ನು ಹೇರಲು ಪ್ರಯತ್ನಿಸಿದಾಗ ೪ನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು ಲಾರ್ಡ ಡಾಲ ಹೌಸಿ. ಈ ನೀತಿ ಅನುಸರಿಸಿ ವಸಪಡಿಸಿಕೊಂಡ ರಾಜ್ಯಗಳೆಂದರೆ ಸತಾರ, ನಾಗಪುರ, ಉದಯಪುರ, ಝಾನ್ಸಿ,

೧೮೫೭ ರಲ್ಲಿ ಮೊದಲ ಸ್ವಾತಂತ್ರö್ಯ ಸಂಗ್ರಾಮ ನಡೆಯಿತು. ರಾಜಕೀಯ,ಆಡಳಿತಾತಾತ್ಮಕ, ಆರ್ಥಿಕ ಕಾರಣಗಳಲ್ಲದೆ ಸೈನ್ಯದಲ್ಲಿಯ ಅತೃಪ್ತಿಯ ಫಲವಾಗಿ ಬ್ರಿಟಿಷರು ಹೊಸದಾಗಿ ಜಾರಿಗೆ ತಂದ ಎನ್ ಫೀಲ್ಡ ಬಂದೂಕುಗಳನ್ನು ಸೈನಿಕರು ಬಳಸಲು ನಿರಾಕರಿದಾಗ ದಂಗೆ ಸ್ಫೋಟಗೊಂಡಿತು. ೩೪ನೇ ಪದಾತಿ ದಳದ ಮಂಗಳಪಾAಡೆ ಬ್ರಿಟಿಷ ಸಾರ್ಜಂಟನನ್ನು ಕೊಂದು ಹಾಕಿದ. ಬ್ರಿಟಷರು ಪದಾತಿ ದಳವನ್ನು ವಜಾ ಮಾಡಿದರು. ಹೀಗೆ ಲಕ್ನೋದಲ್ಲಿ ಹಜರತ್ ಬೇಗಂ, ಕಾನ್ಪುರದಲ್ಲಿ ನಾನಾಸಾಹೇಬ, ಝಾನ್ಸಿಯಲ್ಲಿ ಲಕ್ಷಿಬಾಯಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು.

ಬ್ರಿಟಿಷರು ಅವರನ್ನೆಲ್ಲ ಸದೆಬಡಿದರು. ಈ ದಂಗೆಯು ವಿಫಲತೆ ಹೊಂದಲು ಕಾರಣಗಳೆಂದರೆ

೧) ದಂಗೆಯು ರಾಷ್ಟಿçÃಯ ಲಕ್ಷಣ ಹೊಂದಿರದೆ ಮಧ್ಯಭಾರತಕ್ಕೆ ಮಾತ್ರ ಸೀಮಿತವಾಗಿತ್ತು.

೨) ದಂಗೆಕೋರರಲ್ಲಿ ಸಮಾನ ಉದ್ದೇಶÀಗಳಿರಲಿಲ.್ಲ

೭.೩ ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಬ್ರಿಟಿಷ ಆಡಳಿತದ ಪ್ರಭಾವ. ಬ್ರಿಟಿಷರಿಗೆ ಭೂಕಂದಾಯ ಸರ್ಕಾರದ ಮೂಲ ಆದಾಯವಾಗಿತ್ತು. ಹೀಗಾಗಿ ಹಳೆಯ ಕಂದಾಯ ಪದ್ಧತಿಗಳ ಜೊತೆಗೆ ಹೊಸ ರೀತಿಯ ಕಂದಾಯ ಪದ್ಧತಿಗಳನ್ನುಜಾರಿಗೆ ತಂದರು. ೧೭೯೩ ರಲ್ಲಿ ಲಾರ್ಡ್ ಕರ‍್ನವಾಲಿಸ್ ಬಂಗಾಲದಲ್ಲಿ ಶಾಶ್ವತ ಕಂದಾಯ

ಪದ್ದತಿಯನ್ನು ಜಾರಿಗೆ ತಂದನು. ಬಾಂಬೆ & ಮದ್ರಾಸ ಪ್ರಾಂತ್ಯಗಳಲ್ಲಿ ಈಸ್ಟ ಇಂಡಿಯಾ ಕಂಪನಿಯು ಕೃಷಿಕರೊಂದಿಗೆ ನೇರವಾಗಿ ಕಂದಾಯ ಕೊಡುವ ಒಪ್ಪಂದ ಮಾಡಿಕೊಂಡಿತು. ಇದುವೆ ರೈತವಾರಿ ದ್ಧತಿ. ಭಾರತದ ವಾಯವ್ಯ ಭಾಗದಲ್ಲಿ ಈಸ್ಟ ಇಂಡಿಯಾ ಕಂಪನಿಯು ಮಹಲ್‌ನೊಂದಿಗೆ ಕಂದಾಯ ನೀಡುವ ಒಪ್ಪಂದ

ಮಾಡಿಕೊAಡಿತು. ಮಹಲ್ ಎಂದರೆ ಒಂದು ಕಂದಾಯ ಘಟಕವಾಗಿದು, ಇದು ಒಂದು ಹಳ್ಳಿಅಥವಾ ಅನೇಕ ಹಳ್ಳಿಗಳಿಂದ ಕೂಡಿತ್ತು. ಭಾರತದ ಸಂಪತ್ತು ಮತ್ತು ಸಂಪನ್ಮೂಲಗಳು ಯಾವುದೆ ಆರ್ಥಿಕ & ವಸ್ತು ರೂಪದ ಸಮಾನ ಆದಾಯ ಅಥವಾ ಲಾಭವಿಲ್ಲದೆ ಇಂಗ್ಲೆ0ಡಿಗೆ ಹರಿದು ಹೋದದ್ದನ್ನು ಸಂಪತ್ತಿನ ಸೋರಿಕೆ ಎಂದು ಕರೆಯಲಾಗಿದೆ. ಈ ಸಿದ್ದಾಂತ ಪ್ರತಿಪಾದನೆ ಮಾಡಿದವರುದಾದಾಬಾಯಿ ನವರೋಜಿ.

೧೮೩೫ ರಲ್ಲಿ ಲಾರ್ಡ್ ಮೆಕಾಲೆ ಇಂಗ್ಲಿಷ ಶಿಕ್ಷಣದ ಬೆಂಬಲಿಗರ ಅಭಿಪ್ರಾಯ ಬೆಂಬಲಿಸಿ

ಭಾರತದಲ್ಲಿ ಪಾಶ್ಚಿಮಾತ್ಯ ಮಾದರಿಯ ಶಿಕ್ಷಣ ವ್ಯವಸ್ಥೆಯ ಬೆಳವಣಿಗೆ ಹಾಗೂ ಇಂಗ್ಲಿಷ ಶಿಕ್ಷಣದ ಮಾದ್ಯಮವಾಗಿರಬೇಕೆಂದು ಪ್ರತಿಪಾದಿಸಿದ. “ರಕ್ತ ಮತ್ತು ಬಣ್ಣದಲ್ಲಿ ಭಾರತೀಯ ಆದರೆ ಅಭಿರುಚಿ, ಹವ್ಯಾಸ ಬುದ್ಧಿಮತ್ತೆಯಲ್ಲಿ ಇಂಗ್ಲಿಷರ0ತಹ ವರ್ಗ ಸಷ್ಟಿಸಲು ಅವನು ಉದ್ದೇಶಿಸಿದ್ದ. ೧೮೫೪ ರಲಿ ಚರ‍್ಲ ವುಡ್ ಶಿಕ್ಷಣದ ಅಭಿವೃದ್ಧಿಯನ್ನು ಕುರಿತು ತನ್ನ ವರಿದಿಯನ್ನು ಸಿದ್ದಪಡಿಸಿದ. ಇದನ್ನು “ಇಂಗ್ಲಿಷ ಶಿಕ್ಷಣದ ಮಹಾಸನ್ನದು” ಎಂದು ಕರೆಯಲಾಗಿದೆ.


Saturday, November 2, 2019

ಹನಿಗವನ

ಸಿರಿವಂತ ಹಣದ
ರಾಯಭಾರಿ,ಆದರೆ
ಯಾವಾಗಲೂ
ಬರಿ ವರಿ ವರಿ
ಬಡವ ಗುಣದ
ರಾಯಭಾರಿ ಆದರೆ
ಯಾವಾಗಲೂ
ದೊರೆ ದೊರೆ

ಬಸನಗೌಡ ಗೌಡರ

ಛಲ

ಕುಂಟ ಕುದುರೆ ನಾನು
ಬಂಟ ನಾಗಬೇಕೆಂದಿಲ್ಲ ,
ಸಾಲು ಕುದುರೆಯ
ನಡುವೆ ನಿಲ್ಲಬೆಕೆನ್ನುವುದು
ನನ್ನ ಹಟ
ಸೋಲು ಗೆಲುವಿನ ಚಿಂತೆ
ನನಗಿಲ್ಲ ಸೊಲಿನಲ್ಲು ಗೆಲವು ಉಂಟು....
       
      ಬಸನಗೌಡ ಗೌಡರ 

Monday, October 28, 2019

ಸಾಧನೆ

 ಸಾಧನೆ ಸರಳವಲ್ಲ ಶಿಷ್ಯ
 ವಿರಳರಿಗರಳವುದೀ ವಿಷ್ಯ
ತೆಗಳುವವರು ಹೊಗಳ ಬೇಕು
ಮಾಡಿದ ಕರ್ಮದ ಬೆವರು
ದೂಡುವುದು ವರ್ಮ
ಧರ್ಮ ನೀ ಪಾಲಿಸಬೇಕು
ಗರ್ವದ  ದನಿ ಸುಡಬೇಕು

ಸಾಧಕನದಲ್ಲ  ಅದು ರಹದಾರಿ
ಕಂಟಿ  ಮುಳ್ಳು ಬರಿ ಕಮರಿ
ಕರದಲಿ ಸಾಧನ ಪ್ರಶಸ್ತಿ ಗರಿ
ಕಾಲಿನ ತುಂಬಾ ನೆತ್ತರದ ಗೆರಿ



ಭಾವ ಭಾಷೆ ಬಂಧನ


ಭಾಷೆ ಒಂದು ಭಾವ ನೂರು
ಏಕೆ ಬಂಧನ
ಬಾಲ್ಯ ಕಿತ್ತು ಭಾರ ಹೆರಿ
ಏಕೆ  ನಿಂದನ
ಹಲವು ಭಾಷೆ ಕೆಲವು ವೇಷ
ಉದರ ಪೋಷಣ

ತೆಲುಗು ತಮಿಳು ಬಂಗಾಳಿ ಹಿಂದಿ
ಕನ್ನಡಕಲ್ಲ  ಬಂಧನ
ಆಗಸವೊಂದೆ ತಾರೆ ನೂರು
ಬೆಳಕು ಒಂದೆ ಕಂದನ
ಭೇಧ ಭಾವ ನಾವು ನೀವು
ಕೊಳಕು ಬೇಡ ವಂದನ

ಹಲವು ಭಾಷೆ  ಅಲ್ಲ ವಿಷ
ಭಾವ ಬೆಸುಗೆ  ಬಂಧನ
ತಾಯಿ ನುಡಿ  ಬಾಳಿಗೆ ಮುನ್ನುಡಿ
ಭಿನ್ನ ನುಡಿ  ಅನ್ನದ ನುಡಿ
ಜೊತೆಯಾಗಿ ನಡೆಸು  ಕಂದನ
















Friday, October 18, 2019

astra

ಅಣುಬಾಂಬು ತಯಾರಿಕೆ

 ಬಳಕೆಗೆ ಅಲ್ಲ

ಸ್ವಗೌರವ ,ಸ್ವಪ್ರತಿ಼ಷ್ಠೆ,ಸ್ವರಕ್ಷಣೆಗೆ

 ಸಂಹಾರಕ್ಕಲ

ಹಿಂಸೆ, ದಬ್ಬಾಳಿಕೆ,ಶೋಷಣೆ

ಸಬಲರಲ್ಲಿಇರಲ್ಲ

ಅಹಿಂಸೆ ತಾಳ್ಮೆ ಸಹಣೆ

ದುರ್ಬಲರಲ್ಲಿ ಬರಲ್ಲ

ಅಣು ಬಾಂಬ ಬಳಕೆಗೆ  ಬಿಡಬಾರದು 

ಬಿಟ್ಟರೆ ಬಿಟ್ಟ ವನು ಇಲ್ಲ

ಬಿಡಿ ಸಿಕೊಂಡವನು ಇಲ್ಲ

ಸಹನೆ ದುರ್ಬಲತೆ ಅಲ್ಲ 

ಅದು ಸಬಲ ನ ಲಕ್ಷಣ


ಅದುವೆ ಕೊನೆ ಕ್ಷಣ







Sunday, October 13, 2019

ಪ್ರವಾಹ

ಆಗಸದ ಚಪ್ಪರಕೆ ಚೂರಿ ಗೀರಿ
ಬೊಗಸೆ ನೀರು ಕಾಣದ ನೆಲವೆರಿ
ಬಂತಲ್ಲ ಈ  ಮಹಾ ಮಾರಿ
ಕನಸು ಕಾಣುವ ಕರ್ಮಯೋಗಿಯನೆರಿ
ಹಳ್ಳ ತೆಗ್ಗು ದಿಣ್ಣೆ ಮೀರಿ
ಊರು ಕೇರಿ ಆಕ್ರಮಣದ ಪೇರಿ


ಹಗಲು ರಾತ್ರಿ ಚಳಿ ಗಾಳಿ ಮೀರಿ
ಹೊಟ್ಟೆ ಬಟ್ಟೆ ಬಯಕೆಯ ಮೀರಿ
ದುಡಿದವನಿಗೆ ನೀ ತಗೆದೆ ಘೊರಿ
ಕಣ್ಣು ಬಿಟ್ಟಾಗ  ಬದುಕು ಬಿಕಾರಿ
ಭರವಸೆ ಭವಕೆ ಬೆಳಕಾದ ನದಿ
ಇಂದು ಮಸಣದಾ ಬೆಗುದಿಯ ಹಾದಿ

ಉಟ್ಟ ಬಟ್ಟೆಯಲಿ ದಟ್ಟಡವಿ ಸೇರಿ
ನಿಟ್ಟುಸಿರು ಬಿಟ್ಟು ನೊಡಿತಾ ಕೇರಿ
ಕುರಿ ಕತ್ತೆ ಗೊಗೆ ಕಾಗೆ ಗುಡಿಸಿ
ಕೊಂಪೆ ಮಾಡಿತಾ ಮರಾಠಿ  ಮಳೆ
ಮಹಾಮಳೆ  ಮೌನದುತ್ತರಕ್ಕೆ
ಮಾನವರೆಲ್ಲರು ತತ್ತರ

ನಾ ಮೇಲು ತಾ ಮೇಲು ಎಲ್ಲರೂಬುಡಮೇಲು
ಬಡವ ಶ್ರೀಮಂತ ನಿನಗೆಲ್ಲರು ಸರಿಸಮಾನಾರು
ಬದುವಿಗಾಗಿ ಬಡಿದಾಡಿ ಬೆಂದವರು ಕೊಂದವರು
ಇಂದು ಬರಿ ನೊಂದವರು ಬರಿ ನೊಂದವರು
ಬಸವಾದಿ ಶರಣರು,  ಸಂವಿಧಾನ ಹೇಳಿದರೂ
ಬೆಸೆಯದ ಸಮಾನತೆ , ಮರೆಯಿತೀಗ ಅಸಮಾನತೆ

ಬೆಂದಕಾಳೂರಿಗೆ ತಲುಪಿತು ಭವನೆ
ಹಾದಿ ಬೀದಿಗಳಲ್ಲಿ ದುಖ ಸಂತಾಪ
ದಾನ ಧರ್ಮಗಳ ಮೇಲಾಟ
ಹೃದಯ ತುಂಬೀ ನೀಡಿದವರೆಸ್ಟೋ
ಪೋಟೋಕೆ ಹಲ್ಲು ಗಿಂಜಿದವರೆಸ್ಟೋ
ನಿಸರ್ಗದುತ್ತರಕ್ಕೆ ಗರ್ವ ರೆಸ್ಟೋ ರೆಸ್ಟೋ




























ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...