Friday, December 21, 2018

ಯಾವ ಜನ್ಮ ಪುಣ್ಯ ಫಲವು

ಯಾವ ಜನ್ಮದ  ಪುಣ್ಯ ಫಲವು
ನಾವು ಧನ್ಯರು
ಭಾರತಾಂಭೆ  ಉದರದಲ್ಲಿ ಜನಿಸಿ
ಬಂದವರು

ಹಿಮಾಲಯ ಗಿರಿ ಕಂದರ
ನಮಗೆ ಹಂದರ
ಮಲಯ ಮಾರುತ ತಾಗಿ
ಚಾಮರ ಬಯಲು ಭಾರತ ಆಲಯ ,

ಮಹಾಭಾರತ ರಾಮಾಯಣ
ಧರ್ಮ ಶ್ರೇಷ್ಟರ ರಾಮ ನಿಷ್ಠರ
ಕೃಷ್ಣ ಪರಮಾತ್ಮರು
ಮಾರ್ಗ  ತೋರಿದ  ಶ್ರೇಷ್ಠ ಆಲಯ

ಹಿಂದೂ ಮುಸ್ಲಿಮ್ ಕ್ರೈಸ್ತ
ಪಾರ್ಸಿ ಜೈನ ಬೌದ್ಧರ ನಿಲಯ
ಸರ್ವ ಶಾಂತಿ ಸಹಿಷ್ಣು
ಭಾವದ ಭಕ್ತಿಯ  ಆಲಯ

ಬಂಗಾಳಿ ತಮಿಳು ಗುಜರಾತಿ
ಮರಾಠಿ ಕನ್ನಡ ಹಿಂದಿ
ಸೊಗಡಿನ ಬೆಡಗಿನ ನುಡಿಗಾನ
ಇದೆ ನಮಗೆ ಸವಿಗಾನ

ಇಜಿಪ್ತ  ಚೀನಾ ಮೆಸೊಪೊಟೇಮಿಯಾ
ಪುರಾತನ ನಾಗರಿಕತೆಯ ಸಖ್ಯ
ಮಿಕ್ಕಿ  ಬೆಳೆದಾ ಇತಿಹಾಸ ಸಾರುವ
ಶ್ರೇಷ್ಠ ಪರಂಪರೆ ಸವಿವರ

ಕಡಲ ತೀರ ಅಡವಿ ಸಾಲು
ಒಡಲೊಳದಿರು ಬಂಗಾರ ತೇರು
ಸಿಂಗಾರಕೆ  ಇದಕ್ಕಿಂತ ಯಾರಿಲ್ಲ
ಸರಿಸಮಾನ ಸವಾಲು














No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...