Saturday, April 25, 2020

ವಿರಹವೇದನೆ

ಟ್ಯುನಿಗಾಗಿ ಸಾಹಿತ್ಯ
(ಹೆಣ್ಣು ದ್ವನಿ)

ನಾ ಬಂದು ಸೇರಲು ,ನೀ ದೂರ
ಹೊದೆ  ಓ ಇನಿಯಾ  /
ಬಿಗುಮಾನ ಯಾಕೆ ನಾ ತಿಳಿಯದಾದೆ
ನಾ ಕಟ್ಟಿದಾ ಕನಸು ಸುಟ್ಟಾಕಿದೆ
ಓ  ಗೆನೆಯಾ //ಪ //

ಸಾವಿರ ಮೈಲು, ಸರಿ ದಾರಿ ಎಂದು
ನೂರೊಂದು ಮುತ್ತು
ನೀ ನೀಡಿದೆ ಅಂದು /
ನವಿರಾದ ಅಪ್ಪುಗೆ ಮರೆತಿಲ್ಲವಿನ್ನು
ಮಾವಿನ ಚಿಪ್ಪು ಚೀಪಿದೆ
ಮೇಲೆ ದೊರಾಚೆ
ಎಸೆದಾಂಗ ಇಂದು //

ನಾ ಮಾಡಿದ್ದು ತಪ್ಪಾದರೇನು
ತಡ ಮಾಡಿ ಕೊಲ್ಲಬೇಡ
ನಾ ಕಂಡ ಕನಸು  /
ತಿಳಿ ಮಾಡು ಮುನಿಸು
ಕಾಲದಾ ಒತ್ತಡ ನೀ ಮನ್ನಿಸು
ಆಸೆ ಬರುಡಾಗಿದೆ, ಹಸು ಹಾಕಲಿ
ಅಲ್ಲೊಂದು ಕರು //
ನೀನಿಲ್ಲದಾ ಅರಮನೆ
ಅದು ಬಂದಿಖಾನೆ
ನಾನಿರುವದಾದರು ಹೇಗೆ ?
ಅದು ನರಕಯಾತನೆ //

ಮತ್ತೊಮ್ಮೆ ಕರುಣಿಸು
ಮುಂಗಾರು ಬಿದ್ದಾಗ ಬರಿ ಕಂಟಿ
ಚಿಗುರಿ ಚಿತ್ತಾರ ಹರಡಿಸು
ನೀ ಎನಗೆ ಬಾಳ ಹರಿಸು /
ನೀನಿಲ್ಲದ ಬಾಳು ಸುಡಗಾಡು
ನಾ ಮರೆಯುವದಾದರು ಹೇಗೆ
ನಾ ಕಾಣಬೇಕು ಕನಸು
ನನಗೆ ತರಿಸು ಹೊಂಗನಸು//

            ಬಸನಗೌಡ ಗೌಡರ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...