Sunday, May 3, 2020

* ಕಂದ *


ಮನೆಗೆ ಹಂದರ ಬಾಳು ನಂದನ
ನವ ಜೋಡಿ ನಲಿವು ನರ್ತನ
ಭುವಿಯ ಮೇಲೆ ಭಾಸ್ಕರ ಕಿರಣ
ನವ ಮಾಸ ಎಣಿಕೆ ನವನೂತನ //

ಬಯಕೆ ಬಳಲಿಕೆಯು ಅಪ್ಪಳಿಸಿ
ಮೇಲೆ ಮಾವು, ಮಣ್ಣು ಮುಕ್ಕರಸಿ
ಬಾಳೆಂಬ ಕಡಲು ಬಂದತೆ ಸವೆಸಿ
ಬಂದೆ ಬಿಟ್ಟಿತು ಭಾರವಾದ ಮಾಸ //

ಮೋಡದಲಿ ಗುಡುಗು ಕೊಲ್ಮಿಂಚು.
ಹನಿ ದಾವಿಸಿ ಧರೆಗಿಳಿದು ಇಂಚಿಂಚು.
ತಾಯಿ ಗರ್ಭದಲಿ ಸಿರಿ ಸಂಚಲನ
ಬಸಿದ ರಕ್ತದ ಉಸಿರು ಗಾನ .//

ಸೋಮನುದಯದ ಪ್ರಭೆ ಸೇರಿ
ಬಾಳ ಜೊಡಿಗೆ ಧನ್ಯತೆಯ ಹೇರಿ
ಕುಣಿದು ಕುಪ್ಪಳಿಸಿತು ನವರಂಗ.
ಕಾಯಬೇಕು ಅಪ್ಪಿ ಭಾವತರಂಗ //

ಒಳಹೊರ ಇವನ ಸಾಲು ಸವಾಲು.
ನಂದಗೋಕುಲ ತಾನಾಡಿದ ಮಹಲು
ಬಾಯಿಬಿಡೆ ಗಿಳಿ ಗುಬ್ಬಿ ಕೊಗಿಲೆ   
ತಾನುಲಿದ ತೊದಲೆ ರಾಗ ಆಲಾಪ. //

ಅನವರತ ಗೆಜ್ಜೆಯ ನಾದ ಕುಣಿತ
ನುಜ್ಜುವೆ ಕಣ್ಣರೆಪ್ಪೆ ಸಾಲದಾಯಿತು
ಕೃಪೆ ಇನ್ನೆರಡು ನಯನವಿರಬೆಕಿತ್ತು
ಆ ಶಿವ ಜಿಪುಣ ಕಳಿಸಿದ ಮರೆತು //

ಹಸಿರಂಗಿವುಟ್ಟು ಕೆಸರುಗದ್ದೆ ಓಟ 
ಕೊಸರಿ ,ದಿಟ್ಟಿಸಿ  ನೋಡುವ ನೋಟ
ನೇಸರನಿಗೂ ಆ ಪುಲಕಿತ ಮೈಮಾಟ ದೃಷ್ಟಿತಾಗಿತು,ನೀನೆಮ್ಮಮನೆದೀಪ //

                    ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...