Sunday, May 3, 2020

K S R N. ನಮನ

*ನಿತ್ಯೋತ್ಸವ ಕವಿಗೆ ಕವನ ನಮನ*

ಮರೆಯಲಾರೆ ನಿಮ್ಮ ಹೆಸರ
ನಮ್ಮ ಬಾಳ ಬದುಕು ಪುಟದಲಿ
ನಿತ್ಯೋತ್ಸವ ಕವಿಯಾಗಿಹೊರಹೊಮ್ಮಿ
ತೋರಿದೆಮಗೆ ದಾರಿ ಹೆಮ್ಮೆಯ //

ಕವನವೆಂಬ ಭಾವ ಬಿತ್ತಿ
ನೆಲೆಸಿದೆಮ್ಮ ಹಣೆಯ ಭಿತ್ತಿಯಲ್ಲಿ
ಶಾಸನದ ಸಾಲಿನಲ್ಲಿ ಕನ್ನಡವ ಬಿತ್ತಿ
ಅಜರಾಮರಗೊಳಿದೆ ವೈಭವವೆತ್ತಿ //

ನಾಡಿನ ಸಿರಿ ನುಡಿಯಲ್ಲಿ ಸೇರಿಸಿ
ನಸುಕಿನ ಹೊಂಬೆಳಕ ಜಗದಲಿ ಹರಿಸಿ
ನಮ್ಮನು ಕುಣಿಸಿ ಹಾಡಿಸಿ ಹಾರೈಸಿ
ನಮ್ಮಿ ಜಗಕೆ ಸಿಗದೆ ಪ್ರಯಾಣಿಸಿದೆ //

ಮಲೆಗಳ ಮನೆ ಮನಗಳ ಗೆದ್ದು
ನಾಡಿನೆಲ್ಲೆಡೆ ವ್ಯಾಪಿಸಿ ಕನ್ನಡ ಗೆದ್ದೆ
ಮತ ಕುಲ ಮೀರಿ ಹಿತವನು ಸಾರಿ
ಕತೆಯಾಗುಳಿದ ನಿಸಾರ್ ಅಹಮದ್//

                   ಬಸನಗೌಡ ಗೌಡರ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...