Monday, May 4, 2020

* ಸಂಧ್ಯಾ ಕಾಲ *


ಸಂಧ್ಯಾ ಕಾಲ, ಸುಂದರವಾಗಲು
ಬಂದು ಸೇರಬೆಕು ಸಾಹಿತ್ಯ ಕಲೆಗೆ 
ಗೊಬ್ಬರವಿದು  ಹೂವು ಹಣ್ಣು ಫಲ 
ಬೆಳೆದು ಸತತ ಸುವಾಸನೆ  ತಮಗೆ //

ದುಂದುವೆಚ್ಚದಿ ಬದುಕು ನೆಡೆಸಲು
ಸವಕಳಿಯದು  ಬಾಳು ದಿನಾಲು
ಬದುಕೇ ಆಗುವುದು ನಿತ್ಯ ಕೊರಡು. 
ಜಾಣನಾಗಿ ಬರೆ ಸತ್ಯದ ಕರಡು. /

ನಿತ್ಯ ಧ್ಯಾನ ಸತ್ಪುರಷರ ಸಂಘ
ಎತ್ತ ಸಾಗಿದರು ಶಾಂತಿಗಿಲ್ಲ ಭಂಗ
ಕಡುವಚನ ಕೇಳಿ ನೀನಾಗು ಕಿವುಡು 
ನೀತಿಗೆ ತಲೆಬಾಗದ ಬಾಳು ಬರಡು //

ಬರುವುದು ಬರಲಿ ,ನಿನ್ನದೆ ನೆರಳು 
ಕಡಲು ಸೇರಲು ಸಾವಿರ ನದಿಗಳು
ತಡೆ ಮಾಡಿದ  ಬಗೆ ಇದೆಯೇ ಹೇಳು
ಮೋಡಕೆ ನೀವೆ ತಳ ವಾದವರು //

ಸೃಷ್ಥಿಯ ನಿಯಮಕೆ ತಲೆಬಾಗು 
ಇಂದೋ ನಾಳೆಯೊ ಕಾಲನ ಕರೆಗೆ
ನಗುತಾ ಹಾಕು ಬೇಕು ಸಲಾಮು  
 ಇದಕ್ಕಿಂತ ಇಲ್ಲ ಭಿನ್ನ ಮಲಾಮು //

                ಬಸನಗೌಡ ಗೌಡರ 
   
   

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...