Tuesday, May 5, 2020

* ಅರಮನೆ *

ನಾನು ನನ್ನೊಳಗೊಂದು
ಅರಮನೆಯ ಕಂಡೆ ಅಂದು,
ನಮ್ಮಪ್ಪನ ಬದುಕಿನ
ಸಿರಿಮನೆಯಲೊಂದು ಅರಮನೆ...
ಸುಂದರ ಸಂಸಾರ, ನಾವೂ
ಕಲಿಯಬೇಕಿತ್ತು ಅದರ
ಸಹಜಿವನ  ನೊಡಿ !
ಚಿಲಿಪಿಲಿ ನಾದಕ್ಕೆ ಭಾಸ್ಕರುನು
ಓಡೋಡಿ  ಬರುತ್ತಿದ್ದ ಅಂದು ..
ನಮ್ಮನೆಯ ನಾಯಿ ಬೆಕ್ಕಿಗೂ
ಅವರದೇ ಧ್ಯಾನ,
ಇವರು ಜಗಳ ಮಾಡುತ್ತಾರೆ ಎಂದು ? ,
ಅವರ ಪ್ರಿತಿಯ ಸರಸಲ್ಲಾಪ ನೊಡಿ.
ಚಿಕ್ಕ ವಿಷಯಕ್ಕೂ ರೇಗಾಡುತ್ತಿದ್ದ
ನಮ್ಮಪ್ಪನೂ ನಾಚಿದನು ಒಮ್ಮೊಮ್ಮೆ.....
ಉಬ್ಬಿ ಉಬ್ಬಿ ಜಿಗಿದವರಿವರು
ಈ ಗುಬ್ಬಿಗೂ.. ಬಂತಲ್ಲ ಇಂದು
ಗಂಡಾಂತರ. ತಂತಿಯೆ ಇಲ್ಲದ
ನಿಸ್ತಂತು ವಾಹಕದಿಂದ
ಬಾಳು ಗಂಡಾಂತಾರ .
ಈ ಚಿಲಿಪಿಲಿ ಕೇಳಬೇಕೆನೋ
ನಾವು ಯಂತ್ರ ಗಳಿಂದ !

          ಬಸನಗೌಡ ಗೌಡರ
   

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...