Wednesday, September 30, 2020

* ನಾರಿ ಸ್ವರ್ಗದ ದಾರಿ *

ಮಾತನಾಡದೆ ಮೌನದಿಂದ ಭಾವ 
ಬಿತ್ತುವ ಮಾನಿನಿ ಮನೆಯೆ ಜೀವಫಲ
ಬೆರೆತು ಬಾಳುವ ಪತಿಯ ಪಡೆದ 
ಸತಿಯ ಮನೆಯದು ನಿತ್ಯ ದೇಗುಲ//

ಸ್ವಾರ್ಥದ ಸೇತುವೆಯ ಕಟ್ಟಿ ಸೆಳೆವ 
ಸುಳಿ ದಾಟಿಸುವ ನಟನೆಯ ನಗೆ ಬೀರಿ 
ಗಾಳಿ ಬಂದಾಗ ಜಿಗಿದ ಅಂಬಿಗನಂತೆ
ಗೊಸುಂಬೆ ಜನರದೆ ಇಲ್ಲಿ ನಿತ್ಯಸಂತೆ//

ಹುಟ್ಟಿದ ಮನೆಯಲ್ಲೂ ಪಟ್ಟ ಕಟ್ಟಲಿಲ್ಲ
ಮೆಟ್ಟಿದ ಮನೆಯಲ್ಲೂ ಕಾಟ ತಪ್ಪಲಿಲ್ಲ
ಬಿಟ್ಟು ಬದುಕವ ಎದೆ ಗಂಡುಗಳಿಗಿಲ್ಲ
ಜಿಡ್ಡು ಹಿಡಿದ ಸಡಿಲ ನಿಯಮಗಳೆಲ್ಲ//

ನವ ಲೋಕ ಕಟ್ಟುವ ನಾರಿ ನಿನ್ನಯ
ರಥದ ಗಾಲಿಗಳ ಮರ್ಮ ಅರಿತರೆ 
ದಾರಿ ಬಹು ಸರಳ, ತಿಳಿಯದೆ ಮರೆತರೆ 
ಗಾಲಿಗಳು ತಿರುಗುವವು ಹೆರಾಪೆರಾ//

                  ಬಸನಗೌಡಗೌಡರ 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...