Sunday, October 18, 2020

* ಸಿದ್ದಗಂಗೆಯ ಸಿದ್ದಿ ಪುರುಷ *

ನಡೆದಾಡಿದ ದೇವರೆ ನಮಿಪೆ ಗುರುವೆ 
ನಿನ್ನ ಚರಣಕೆ  ಹೂವು ಫಲವ ತರುವೆ/ಪ/

ಸಿದ್ದಗಂಗೆಯ ಸಿದ್ದಿ ಪುರುಷ ಎದ್ದು ಬಾ
ಹುದ್ದೆಗಾಗಿಯೆ ಗುದ್ದಾಡಿ ನಿದ್ದೆಗೆ ಜಾರಿ
ಒದ್ದಾಡುವ ಜನರ ಉದ್ಧಾರ ಮಾಡಲು
ಶುದ್ಧ ಮನಸ್ಸಿನ ಪ್ರಭುವೆ ನೀನೆದ್ದು ಬಾ//

ಅನ್ನ ಅಕ್ಷರ ಧರ್ಮದ ಮರ್ಮಸಾರಿ
ಕಣ್ಣು ತೆರೆಸಿದೆ ಭುವಿಯ ಮಕ್ಕಳಿಗೆ/
ಬದುಕು ಕಲಿಸಲು ಕಟ್ಟಿದೆ ಜೋಳಿಗೆ 
ಬಾಗಿ ನೆಡೆದಾಗ ಬಾಳಾತು ಹೋಳಿಗೆ//

ಜಾತಿ ವಿಷವರ್ತುಲ ಮೂಲ ಹರಿದು  
ಪಕ್ಷ ಪಂಗಡದ ಪರಿಭಾಷೆಯ ಮೀರಿ    
ಪಳಗಿಸಿ ಪಾಠ ಕಲಿಸಿ ಶರಣ ತಯಾರಿ
ಪವಡಿಸಿದೆ ಜಗಜನರ ಹೃದಯವೇರಿ//

ಕಾವಿಯ ಕರ್ಮದ ಮರ್ಮ ಅರುಹಿ
ಕಡಲಂತೆ ಒಡಲೊಳಗೇ ಸಲುಹಿದೆ
ಹಡೆದವರ ಪಡುವ ಸಂಕಷ್ಟ ಕಡಿದೆ
ಹರನಂತೆ ಪರರ ಬದುಕಿಗೆ ಬಾಗಿದೆ//

               ಬಸನಗೌಡ ಗೌಡರ  


No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...