Friday, November 13, 2020

" ರವಿ ಬೆಳಗೆರೆ ಗೊಂದು ನುಡಿನಮನ"

" ಭಾವ ಪೂರ್ಣ ಶ್ರದ್ಧಾಂಜಲಿ "

ರವಿ ಜಾರಿದ ಬೆಳೆಯುವ 
ರವಿ ಜಾರಿದ ...
ಗೆರೆಗಳನೆ ಗರಗರನೆ ತಿರುಗಿಸಿ 
ಬಾನಂಚಿಗೊರಗಿದ... 
ಬಳ್ಳಾರಿಯಿಂದ ಬೆಂಗಳೂರಿಗೆ ಬೆಳೆದು 
ಬಹುತ್ವವನ್ನು ಬರೆದು ಬದಲಾದ ಬಯಲಾದ...
ಬೆಳ್ಳಿಯ ಗೆರೆ ಎಳೆದ 
ಎದೆಗಾರಕೆ ಹದವಾಗಿ ಹೈ ವೋಲ್ಟೇಜ್ 
ಬರಹ..... "ಹಾಯ್ ಬೆಂಗಳೂರುು "... ಬರೆದ
ಮಳಿಗೆ ಮಳಿಗೆಗಳ ಕೊರಳಿಗೆ ಹಾರ..! 
ಕೊಂಡು ಓದುವವರು ಒಂದು ಬಣ 
ಓದಿ ಬಿಟ್ಟಾಗ ಗರಬಡಿದು ಓದಿದವರದೊಂದು ಬಣ 
ಬಸ್ಸು,ರೈಲು ನಿಲ್ದಾಣ
ಪಯಣಿಗರ ಪ್ರಿಯರದ್ದೊಂದು ಬಣ 
ಮಾತು ಬೆಳೆಸಲು ರುಚಿಕರ ಚರ್ಚೆಗೆ ಚಪಲ ಚನ್ನಿಗರದೊಂದು ಬಣ
ಹರಿದು ತುಂಡಾದರೂ ಬಿಡದೆ 
ಬಜಿ, ಕಾರದ ಕಾಗದ ಬಿಡದೆ ಓದಿಸಿದ 
ಅಕ್ಷರ ಗಾರುಡಿಗ.... ಓದಿದರೆ ಬಿಡದಂತೆ 
ಓದಿಸಿದ ಅಕ್ಷರಗಳ ಜೋಡಣೆ ,
ಜೋಲಿ ಹೊಡೆದಂತೆ 
ಮಾತಿನ ಶೈಲಿ, ಬಿಡದೆ ಹಿಡಿದಿಡುವ ಜಾಣ 
ಮಾತಾಡುವ ಮಲ್ಲ ಮಾತಾಡುತ್ತ  
ಅನಂತದ ಕಡೆಗೆ ಈ ನಿನ್ನ  ಪಯಣ 
ಕಾರ್ಗಿಲ್ ಕಾಶ್ಮೀರ ಕಣಿವೆ ಸುತ್ತಿ
ಹುತ್ತದಲ್ಲಿರುವ ಸುದ್ದಿ ಕಿತ್ತು ತರುವ ಎದೆಗಾರ
ಮತ್ತೆ  ಯಾವಾಗ ನಿನ್ನ ಕಿರಣ ....  
ಬತ್ತದೆ ಬರಬೇಕಿತ್ತು  ನಿನ್ನ ಬಾಣ 
ಬತ್ತಳಿಕೆ ಬರಿದಾಯಿತೆ
ನಿತ್ಯ ಕಾಯುತಿಯುತಿರುವೆವು
ನಿನ್ನ ಶಿಸ್ತಿನ ಬರಹ ..!
ಉದಯಿಸು ರವಿ.... 


ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...