Saturday, April 24, 2021

* ಬೇಡ ಉದಾಸೀನತೆ *

ಅಂಟಿಸಿಕೊಂಡು ಓಡಬೇಡ 
ಉದಾಸೀನ, ಸಿನಿಕತನ ನಂಟು.
ಸೊಂಟ ಮುರಿತಾರೋ ತುಂಟಾ//

ವೈದ್ಯರು ಹೇಳಿದ ಬುದ್ಧಿಯ ಮಾತು
ಬಿಸಿ ರಕ್ತದ ನಿನಗ ಕೇಳಿಸೀತು ಹ್ಯಾಂಗ
ಉಸಿರು ಕಟ್ಟಿದರೆ ಅರಿವಾಗತ್ತೊ ಆಗ/

ಕೊರೊನಾ ಕಾಲದ ಕಹಿ ಹೇಳೋದು 
ಹ್ಯಾಂಗ, ಕಾಣಬೇಡರಿ ಗುಂಪಿನಾಗ
ಕೆಮ್ಮಿ ಸಾಯಿತಿರೋ ಸ್ಟೇಚರೀನಾಗ//

ಸತ್ತರೂ ಸಿಗುವುದಿಲ್ಲ ಸ್ಮಶಾನ ಜಾಗ 
ಸುತ್ತಿ ಅರಿವ್ಯಾಗ ಕಟ್ಟತಾರ ಕವರಿನಾಗ
ಸಂಬಂಧಿಗಳೆ ಸೇರಿಸಲ್ಲ ಮನಿಯಾಗ//

ಸ್ಥಳಿಯ ಸರಕಾರ ದಂಡ ಹಾಕಿದರ 
ದುಡ್ಡಿನ ದೊಡ್ಡ ವಾದ ಮಾಡತಾರ
ದ್ವನಿ ನಿಂತರ ಮುರದು ತೆಗ್ಗಿಗಿಡತಾರ//

ಮೂಗು ಬಾಯಿ ಮುಚ್ಚಾಕ ಮತ್ತೆ 
ಮತ್ತೆ ಹೇಳಬೇಕಾ ? ಮಾನಗೇಡಿ
ಮುಖ ಮುಚ್ಚಿ ಕಳಸ್ತಾರೊ ನರಕಕ್ಕ //


            ಬಸನಗೌಡ ಗೌಡರ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...