Sunday, May 2, 2021

* ನಗಬೇಕು ಗೆಳೆಯ ನಗಬೇಕು *

ಅಳು ನುಂಗಿ ನಕ್ಕು ನಗಿಸಬೇಕು 
ಸೆಳುವು ನೋಡಿ ಸರಿಯಬೇಕು
ಆಳ ನೋಡಿ ಇಳಿಯಬೇಕು ಗೆಳೆಯ//

ಬಾಳೊಂದು ಗಿಲಕಿ ಕಲಕಬೇಕು 
ಅಲುಗಾಡಿಸಿ ಶಬ್ದ ಹೊರಡಿಸಬೇಕು
ಇಂಪಾದ ದ್ವನಿ ಆಸ್ವಾದಿಬೇಕು ಗೆಳೆಯ//

ಹುಸಿನಗೆಯ ಹೊಗೆ ಕಂಡು ಹಿಡಿಬೇಕು
ಕಸಗೂಡಿಸುವವರು ಮನಗಾನಬೇಕು
ನಸುನಕ್ಕು ಕಸಕೀಳಬೇಕು ಗೆಳೆಯ//

ಪೈಸೆ ಪೈಸೆಗೂ ಲೆಕ್ಕವಿಡಬೇಕು
ಕೈಲಾಗದವರೆ ನಗಲೇಕೆ ರೊಕ್ಕ ಬೇಕು?
ಮೈಚಳಿ ಬಿಟ್ಟು ನಗಬೇಕು ಗೆಳೆಯ //

ನಗುವಾಗ ಮರೆಯದೆ ನಗಬೇಕು 
ಅಳುವವರ ಮರೆಸಿ ನಗಿಸಬೇಕು
ನಕ್ಕರಾರು ನೂಂದಬಾರದು ಗೆಳೆಯ// 

ನಾ ನಕ್ಕರೆ ಹಾಲು ಸಕ್ಕರೆಯಾಗಬೇಕು
ನನ್ನ ವೈರಿಯೂ ತಲೆ ಅಲ್ಲಾಡಿಸಬೇಕು
ಹಾರಾಡಿ ಕುಣಿದಾಡಬೇಕು ಗೆಳೆಯ//

           ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...