Monday, January 2, 2023

ನುಡಿನಮನ

ಸಿದ್ಧೇeಶ್ವರ ಶ್ರೀಗಳಿಗೆ ನುಡಿನಮನ...

ಸಿದ್ಧಿ ಪುರುಷ ಸಿದ್ಧೇಶ್ವರ ಶ್ರೀ .. 
         
         ನಡೆದಾಡುವ ದೇವರು , ಆಧ್ಯಾತ್ಮಿಕ ಅತ್ಯುನ್ನತ ಪರಮಶಿಖರದ ದಿವ್ಯ ಜ್ಯೋತಿ. ಭೌತಿಕವಾಗಿ ಆರಿದರೂ ಸಕಲ ಜೀವಾತ್ಮದ ಕುಟುಂಬಕ್ಕೆಹೃದಯ ಪಟಲದಲ್ಲಿ ಅರಳಿರುವ ದಿವ್ಯ ಅನಂತ ಚೇತನ. "ದೇವರೆಂದರೇನು ? " ಎಂದು ಕೇಳುವವರಿಗೆ ನಿರ್ಬಿಡೆಯಿಂದ ಹೇಳಬಹುದಾದ ದೈವಾತ್ಮದ ಒಂದು ಚೇತನವದು.ಇಂಥಹ ಒಂದು ದೇಹ ನಮ್ಮ ನಿಮ್ಮೆಲ್ಲರ ಮಧ್ಯದಲ್ಲಿ ನಡೆದಾಡಿತು ಎನ್ನುವುದೊಂದು ಸೂಜಿಗದ ಸಂಗತಿ. ಆಶೆಗಳನ್ನು  ಜಯಸಿ ಪ್ರಕೃತಿಯೊಂದಿಗೆ ಜ್ಞಾನದ ಅನುಸಂಧಾನ ಮಾಡಿದ ದಿವ್ಯ ಪುರುಷ. ಒಂದು ಗಂಟೆಯ ಅವರ  ಮಾತಿನಲ್ಲಿ ಆಶೆಯ ಹೇಸಿಗೆಗೆ ಅಂಟಿದ ನಮ್ಮನ್ನು ಹೊಸ ದಾರಿಯ ಕಡೆಗೆ ನಡೆಸುತ್ತಿದ್ದರು, ಅವರು ಆಧ್ಯಾತ್ಮಿಕ ಗುರುಮನಿ. ಇಂದು ಪ್ರಕೃತಿಯ ಪಂಚಭೂತಗಳಲ್ಲಿ ಲೀನವಾಗುತ್ತಿರುವುದು ಯಾರೆಗೆ ಆದರೂ ಕ್ಷಣ ವಿಚಲಿತವಾಗುವಂತೆ ಮಾಡುವುದು ಸಹಜ. ಮಾನವತ್ವದ ನೆರಳಿನಲ್ಲಿ ದೈವತ್ವದ ಕಡೆಗೆ ಸಾಗಿದ ಮಹಾಮುನಿ, ಬಿಳಿಯ ಬಟ್ಟೆಯನ್ನೆ ಧರಿಸಿ ಆ ಬಟ್ಟೆಯಷ್ಟೆ ಶುಭ್ರವಾದ ಮನಸ್ಸನ್ನು ಹೊಂದಿದ ಮಾನವ ರೂಪದ ದೇವತಾ ಮನುಷ್ಯ .ಅಡ್ಡ ಪಲ್ಲಕ್ಕಿಯಲ್ಲಿ ಮೆರೆಯದೆ ಕಾಲ್ಮುಟ್ಟಿ ನಮಸ್ಕಾರ ಮಾಡುವವರಿಗೆ ದೊರದಿಂದಲೆ ಭೂತಾಯಿಗೆ ನಮನ ಸಲ್ಲಿಸಲು ಸೂಚಿಸುತ್ತಿದ್ದ ,ಹಣ ತುಂಬಲು ನಿರ್ಮಿಸುವ  ಅಂಬರದ ಕಿಸೆಗಳಿಗೂ ಗೇಟ ಪಾಸ್ ನೀಡಿ ಹಣದ ದಾಸನಾಗದೆ ಜನರ ಮನ ಸೇರಬಹುದೆನ್ನುವದನ್ನು ರುಜುವಾತು ಮಾಡಿದ ಸ್ವೇತಮುನಿ, ಮಾನವತ್ವದ ಪ್ರೀತಿಯಮುನಿ ಆಧ್ಯಾತ್ಮಿಕ ಬೆಳಕು ನೀಡಿದ ಜ್ಯೋತಿಮುನಿ ,ಲೌಕಿಕ ಬದುಕಿಗಂಟಿ ಅವರ ಅಮೃತದಂತ ತಾಸು ಮಾತು ಕೇಳಿಯೂ ಮತ್ತೆ ಮತ್ತೆ ಆಶೆಯ ದಾಸರಾಗಲು ಹವನಿಸುವ ಮಾನವರು ನಾವು ನೀವು ನಮ್ಮ ಅಲಾರಾಮ್ ಮುನಿ ಮತ್ತೆ ನಮ್ಮನ್ನೆಚ್ಚರಿಸಲು ಬಾ ಸಿದ್ಧಿ ಪುರುಷ ಸಿದ್ಧೇಶ್ವರ ಶ್ರೀ.

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...