Friday, December 6, 2024

ಕಾಲಚಕ್ರ


ಕಾಲ ಚಕ್ರ ತಿರುಗುತ್ತಿದೆ ಮೇಲೆ ಕೆಳಗೆ
ಸೋಲುಂಡರೂ ಈಗ ಮೇಲಿನ ಸರದಾರ 
ನಿಲ್ಲದದು ನಾನು,ನೀನಂದುಕೊಂಡತೆ
ಬಲ್ಲವರಿಗದು ಬೆಲ್ಲದ ಕರಣಿಯಂತೆ ॥

ಬೆಲ್ಲ ತಿಂದವ ಬಡವನೆಂದದ್ದು ಕಂಡೆ
ಸಕ್ಕರೆ ಸವಿದವ ಶ್ರೀಮಂತನೆಂದದ್ದು ಕಂಡೆ
ಬಂತು ನೋಡಿ ಬೆಲ್ಲದಂಗಡಿಯ ಚಹಾ
ತಂತು ಉಳ್ಳವನಿಗೆ ಚಿಕ್ಕ ಸೋಕಿಯ ಗುಡಿ॥

ಅಕ್ಕಿ ತಿಂದು ಸೊಕ್ಕಿ ನಡೆದವರ ಕಂಡೆ
ರಾಗಿ ತಿಂದು ಬಾಗಿ ನಡೆದವರ ಕಂಡೆ
ಬಂತು ನೋಡಿ ತೃಣದಾನ್ಯದಂಗಡಿ
ತಂತು ಉಳ್ಳವನಗೆ ಪಾಲಿಥಿನ ಚೀಲದಡಿ॥

ನಗರ ಜೀವನ ಪೊಗರಿಲೇಳುವದು ಕಂಡೆ
ಗ್ರಾಮ ಜೀವನ ದೀನಬಾಳೆಂದವನ ಕಂಡೆ
ಬಂತು ನೋಡಿ ಹುಲ್ಲು ಚಪ್ಪಡಿಯ ಪೋಡಿ 
ತಂತು ಉಳ್ಳವನಿಗೆ ಬೆಟ್ಟದ ಬೊಂಬಿನಡಿ ॥

ಬಟ್ಟೆಯನುಟ್ಟು ಬಲ್ಲಿದವನೆಂದದ್ದು ಕಂಡೆ 
ಬಟ್ಟೆ ಇಲ್ಲದವನು ಬಡವನೆಂದದ್ದು ಕಂಡೆ
ಬಂತು ನೋಡಿ ಬಯಲಾದಷ್ಟು ಮೋಡಿ
ತಂತು ಉಳ್ಳವನಿಗೆ ಬೆತ್ತಲೆ ಸೋಕಿಯ ತಡಿ॥


No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...