Sunday, May 31, 2020

* ಸೈನಿಕ ಸಮರ್ಪಣೆ *

ಮರೆಯಲಾಗದು ಭರತ ಭೂಮಿ
ವೀರಪುತ್ರ ಸೈನಿಕನ ತ್ಯಾಗ ಜೀವನ
ಮಡದಿ ಮಕ್ಕಳಮೋಹವ ತೊರೆದು
ಹಿಮತುದಿಗೆ ನಡೆದ ವೈರಿ ಕಾವುಲದು/

ಹಿಮದ ರಭಸಕ್ಕೆ ರಕ್ತ ಹೆಪ್ಪುಗಟ್ಟಿತು
ದೇಶಾಭಿಮಾನದಲಿ ಅವಡುಗಚ್ಚಿದ
ವೈರಿಯ ಬಿಸಿ ರಕ್ತವ ತರ್ಪಣಗೈದನು
ಭಾರತ ಪುತ್ರ ಗೌರವ ನಿನಗರ್ಪಣೆ//

ಹಳ್ಳಿಯ ಬವಣೆ ಬದುಕು ಬಿಟ್ಟು
ತಂದೆ ತಾಯಿಗೆ ವಚನ ಕೊಟ್ಟು
ಹಿಮದ ಗಿರಿ ಮುಖುಟ ಮೀಟಿ
ಹಾರಿಸಿದಲ್ಲಿ ಗೌರವದ ಬಾವುಟ //

ವೈರಿಯ ಶೇಷವೆ ಸಾಗಿ ಬಂದು
ಸಾವಾಗಿ ಕಾದ ಜವರಾಯ ಅಂದು
ದೇಶ ಸೇವೆಗೆ ಹುತಾತ್ಮನಾದ ಬಂಧು
ಶೋಕಸಾಗರ ದೇಶ ಮರುಗಿತಿಂದು//

ಮಡದಿ ಮಕ್ಕಳ ಮೂಕ ರೋದನ
ಮಾತು ಮೌನದಲಿ ಆಯಿತು ಲೀನ
ಮತ್ತೆ ಶಪತ ಕಳಿಸುವೆ ಸೇವೆಗೆ ಮಗನ
ಕಾಡಿದ ಕಣ್ಣೀರು ದೇಶಕೆ ಸಮರ್ಪಣೆ//

             ಬಸನಗೌಡ ಗೌಡರ

Saturday, May 30, 2020

* ಚಿಪ್ಪಿನ ಮುತ್ತು *

* ಚಿಪ್ಪಿನ ಮುತ್ತು *


ನನ್ನನ್ನು ಪ್ರೀತಿಸು ಅಗಲುವ ಮುನ್ನ
ಎನ್ನ ಮುಖ ನೋಡಬಾರದೆ ಚಿನ್ನ
ನಿನ್ನ ಕವಾಟಿನಲ್ಲಿ ಬಂಧಿಸಿಟ್ಟ ಹೊನ್ನು
ಇನ್ನೊಂದು ಬಯಸಿ ಹಾಕುವೆ ಏಕೆ ಕನ್ನ//

ಹಗಲಿರುಳೆನ್ನದೆ ಹಪಹಪಿಸುವೆ ನಿನ್ನ.
ಗಡಿಯಾರ ಮುಳ್ಳಿಗಿಂತ ನಿಕರತನ
ಹಾಡುವೆ ನಿತ್ಯ ಗಾನ ಲಬ್ ಡಬ್
ನಿನ್ನ ತುಡಿತ ಬೆರೆಯುವ ಭಾವಯಾನ//

ಬಯಕೆ ಬೆದರಿ ಬಾಡುವ ಮುನ್ನ
ಕಂಗಳು ರೋದಿಸಿ ಕರಗುವ ಮುನ್ನ
ಕರಗಿದ ನೀರು ಹೋಳೆಯಾಗಿ ಹರಿದು
ಉಪ್ಪಲ್ಲದೆ ಚಿಪ್ಪಿನ ಮುತ್ತು ಮಾಡೆನ್ನ//

ಮರೆತೆ, ಯಮ ಅಡ್ಡಡ್ಡ ಸೀಳುವರು
ಅಗಲಿಸಿ ಕತ್ತರಿ, ತಪ್ಪಿದರೆ ಚಟ್ಟದ ದಾರಿ
ಹಾಳು ಕರಕಲು ತಿನಿಸು, ಕೊಬ್ಬು ಮರೆ
ಹಿತದಿ ಮೈಮುರಿ ಇದೆ ಪ್ರೀತಿಯ ದಾರಿ //

                  ಬಸನಗೌಡ ಗೌಡರ


Thursday, May 28, 2020

* ಬದುಕಿನ ತೇರು*









ಪತಿ ಪರದೈವ ಎಳೆ ಬದುಕಿನ ತೇರ
ಪಟ್ಟಣ ದೂರ ಬೆಟ್ಟ ಬಹು ಇಳಿಜಾರು
ಪರ ಚಿಂತೆ ಬಿಡು, ಬೇಡ ಬೇಜಾರು
ಪರಶಿವನ ನಾಮ ಒಂದೇ ಜಾಗರಣೆ//

ಬಾಹುಬಲದಲಿ ಸಾಕಿದೆ ಹತ್ತು ಹಲವು
ಪಕ್ಕ ಬಲಿತ ಮೇಲೆ ಹಕ್ಕಿ ಹಾರಿದವು
ಸಿಕ್ಕ ಸಿಕ್ಕಲ್ಲಿ ತೆಲುತಿದೆ ತಾ ಮುದಿಹಾವು
ನಿನ್ನ ಸಲುಗೆ ಅವರಿಗೆಸೇರವ ಭಯವು

ಹುಟ್ಟಿ ತವರೆಳೆದೆ, ಬೆಳೆದು ಬಳ್ಳಿ ಎಳೆದೆ
ಬದುಕು ಬಡಿವಾರ, ಗಾಲಿ ಜೋಕಾಲಿ
ನಿಲ್ಲದೆ ನಿಟ್ಟುಸಿರಾಕಿ ಎಳೆದೆ ಬೀಳದೆ
ಸಲ್ಲದೆ ಬರು ಬಿರು ಬಾಣಕೆ ಕಿವುಡಾಗಿ

ದಾರಿ ಯಾವುದು ತಿರುವುಗಳದೆ ಚಿಂತೆ
ಅಪ್ಪಮ್ಮ ಕಲಿಸಿದ ಪತಿಪರದೈವವಂತೆ
ಬಾಗಿ ಬೆಂಡಾದರೂ ಬಿಡದ ಮಾಯೆ
ಬಿಡದೆ ನೆನಪಿಸುವವು ಕನಸಿನ ಛಾಯೆ

               ಬಸನಗೌಡ ಗೌಡರ 

ಸಾರ್ಥಕತೆ






ಕಣ್ಣಲ್ಲಿ ಹುಟ್ಟುವ ಪ್ರೇಮನಿವೇದನೆ
ಕಾಡಾದರೇನು ನಾಡಾದರೇನು ?
ಹೃದಯ ತಟ್ಟಿ ಅರಳಿತು ತನು ಮನ
ಕಾಳಿದಾಸನ ಲೇಖನಿಗದು ಪ್ರೇರಣ//

ಅರಸನ ಸರಸ ಬಯಸಬಹುದೆ ?
ಶಾಕುಂತಲೆಗೆ ಸಾಗಿ ಬಂತು ಬಾಗ್ಯ
ಅಪ್ಸರೆಯ ಮೀರೀಸುವ ತಪಸ್ವಿ ಕನ್ಯೆ
ಕಣ್ಣು ಮಾತನಾಡಿ ಕನಸು ಕಟ್ಟಿದವು.//

ಬಳ್ಳಿ ಬೆಸುಗೆಗೆ ಬೆಳದಿಂಗಳು ಸೂಸಿ
ಬೀಜಾಂಕುರಕೆ ಉಂಗುರವೆ ಸಾಕ್ಷಿ
ದೊರೆ ಮರೆತನು ಜಿಂಕೆ ಶಾಪವಾಗಿ
ಮುರಿಯಿತು ಹೃದಯ ವಿರಹವಾಗಿ //

ಪ್ರೀತಿಗೆ ಬಂತು ಸೇತುವೆ ಮತ್ಸ್ಯವಾಗಿ
ಸಾವು ಸಾರ್ಥಕ ತಾ ಉಂಗುರ ನುಂಗಿ
ಕಾಡು ಮಲ್ಲಿಗೆ ನಾಡು ಸೇರಿ ಹಾಡಿತು
ನಾಡ ಬೃಂದಾವನದಿ ಜಿಂಕೆ ಚೆಲ್ಲಾಡಿತು//

           ಬಸನಗೌಡ ಗೌಡರ

Tuesday, May 26, 2020

* ಆರಕ್ಷಕ *



ಕೊರೊನಾ ಕರ್ತವ್ಯ ಈ ಸೈನಿಕ
ಗಡಿಸೈನಿಕನಿಗೇನು ಕಡಿಮೆ ಆರಕ್ಷಕ
ಮನೆಯ ಬಾಗಿಲೆ ಗಡಿಯಂತೆ
ಮಡದಿ ಮಕ್ಕಳ ತನು ಮುಟ್ಟದಂತೆ//

ಕಾಣದ ವೈರಿಗಳ ಕಡು ಆಕ್ರಮಣ
ಕುಟುಂಬದ ಭಾವಗಳ ಅಲುಗಾಟ
ಮುಂದಿದ್ದರು ಮುಟ್ಟದ ಗೂಣಗಾಟ
ಮುಖ ನೋಡಿ ಮನಸ್ಸು ತಾಕಲಾಟ//

ಮುತ್ತುವ ಹತ್ತು ಭಾವಗಳ ತತ್ತರಿಸಿ
ತುತ್ತು ಇಳಿಯಲು ತಿಣಕಾಡುತಿದೆ
ಹೆತ್ತ ಕರುಳೆ ಜಾರಿದಂತೆ ಹಿಚುಕಿದೆ
ಕರ್ತವ್ಯ ಕೂಗು ಸದಾ ಕುಕ್ಕುತಿದೆ//

ಬಿಸಿಲುಗಾಳಿ, ಹುಸಿಮಾತಿಗೆ ಹೆದರರು
ಸತತ ಕಾಲಿಗೆ ಚಕ್ರಕಟ್ಟಿದವರಿವರು
ಕಾಕಿ ಸಡಲಿಸಿ ಗಂಜಿಗೂ ಪುರಸೊತ್ತಿಲ್ಲ
ದಣಿವಾರಿಸಲು ಪವಡಿಸಲಾಗಲಿಲ್ಲ //

         ಬಸನಗೌಡ ಗೌಡರ 

* ಮಮತೆ ತಾಯಿ*




* ಮಮತೆಯ ತಾಯಿ *

ಮಮತೆಯ ಮಡಿಲಿನ ಹಡೆದಮ್ಮ
ನೀ ಜಗಕ್ಕೆಲ್ಲ ಹೆದರುವೆ ಏನಮ್ಮ
ನಾನಿರುವೆ ನೀ ಮರತೆ ಏನಮ್ಮ
ನಾನು ನಿನಗಮ್ಮ ನೀನು ನನಗಮ್ಮ//

ಲೋಕದ ನಿಂದೆ ಏನೆ ಬರಲಿ
ಕಷ್ಟದ ಕುಲುಮೆಯಲ್ಲಿ ಬೆಂದು
ನಿನ್ನಿಷ್ಟದ ದಾರಿಯಲ್ಲಿ ನೆಡೆದು
ಲೋಕಕ್ಕೆ ಬೆಳಕಾಗುವೆನಮ್ಮ//

ದುಷ್ಟ  ಕೂಳರು ಕಟ್ಟಿದ ಕೋಟೆ
ಭ್ರಷ್ಟರೆ ತುಂಬಿ ಮೃಷ್ಟಾನ್ನ ತಿಂದರು
ನೀ ನಿಕೃಷ್ಟವಾಗಿ ಹೊರಬಂದೆ
ಕೋಟಿ ಛಿದ್ರಗೊಳಿಸುವೆನಮ್ಮ//

ಮಡಿ ಮೈಲಿಗೆ ಮುಂದೆ ಮಾಡಿ
ಮನದಲ್ಲಿ ನಿನ್ನ ಸಣ್ಣವಳಾಗಿ ಮಾಡಿ
ಸಣ್ಣ ಕೂಲಿಯಾಗಿಸಿದರು ತಾಯಿ
ಕಣ್ಣು ಬಿಟ್ಟು ನೋಡೊಮ್ಮೆಕರಗಿಸುವೆ/

        ಬಸನಗೌಡ ಗೌಡರ 

Monday, May 25, 2020

* ಮರೆಯದ ಮಹಾಂತರು *


ಮರೆಯದಿರು ಮಹಾಂತರ ಮಾತಿದು
ಮನ ಒಪ್ಪವ ತನು ಒಪ್ಪವ ಮಾತಿದು/
ಶರಣ ಸಂತರ ಸರಳ ಸಂದೇಶವಿದು
ಮಹಾಂತ ಸಂತರ ಜೋಳಿಗೆ ಮಾತಿದು //

ಕಾವಿ ಜೋಳಿಗೆ ಬೇಡಿಕೆ ಮಾತಿದು
ಸತತ ದುಡಿಯದೆ ಸಂಸಾರ ಹಿಂಡಿದ/
ಸಕಲವು ಇದ್ದು ಸನ್ಮಾರ್ಗ ಹಿಡಿಯದ
ವ್ಯಸನಿಗಳಿಗೆ ಶ್ರೀಗಳ ಕಿವಿಮಾತಿದು//

ಸರ್ವಸಂಗ ತ್ಯಾಗಿ, ಸೇವೆಯ ಯೋಗಿ
ಜಾತಿ, ಮತ, ಪಂಥ,ಧರ್ಮ ಮೀರಿದ/
ಶ್ರೇಷ್ಠ ಸಂತರ ಸನ್ಮಾರ್ಗದ ಮಾತಿದು
ಬಸವ ಪಥದ ನಡೆಯ ಮಾರ್ಗವಿದು/

ಮದ ಮತ್ಸರ ಲೋಭ ವರ್ಜಿಸುವ
ದುಷ್ಚಟ ದಾನ ನೀಡುವ ಮಾತಿದು/
ಸಕಲರಿಗೂ ಲೇಸನು ಬಯಸವ
ಬಸವಾನುಯಾಯಿ ಹಿತನುಡಿಯಿದು/

               ಬಸನಗೌಡ ಗೌಡರ

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...