Sunday, June 7, 2020

* ಜೋಗಪ್ಪ *

ನಮ್ಮೂರ ಜೋಗಪ್ಪ
ನಮ್ಮನ್ನ ನೋಡಿ
ನಗತಾನ ಜೋರು ಕಣಪ್ಪ.
ತೆಲಿಮ್ಯಾಲ ಭಾರ
ಯಾಕಾರ ಕಾರಬಾರ. !
ಊಟಕ್ಕೆ  ಎರಡು ಹೊತ್ತು
ಬಾಳಂದರ ಮೂರು ಹೊತ್ತು 
ಬದಕುವದು ನಾಲ್ಕು ಹತ್ತು
ಇಲ್ಲಾಂದರ ಇವತ್ತು...
ಹೊಗಿ ಬೀಳುವುದು ಮರೆತು
ಹಗೆ ತುಂಬುವುದು ಕಂಡು
ಜೋಗಪ್ಪ ತಲೆ ಸುತ್ತು  !
ಇರಾಕ ಮನೆಯಿಲ್ಲಿ
ಹುಗಿಲಾಕ ಹೊಲ ಇಲ್ಲ
ತಗಲಾಕೊ ಚಿಂತೆ ಮೊದಲಿಲ್ಲ
ತಿರಿಗ್ಯಾಡಿ ಬದುಕು ಕಟ್ಯಾನ !
ಮೂರು ತಲೆ ತಿಂದರೂ ತೀರದು
ಆರು ತಲೆ ಚಿಂತೆ ..!
ಗಾಳಿಗೆ ಗುದ್ದಿ ಏಳು ರೋಗ
ಪಡಕೊಂಡು ದಾಳ ಉರಳಿಸಿದ
ಸಂತೋಷ ಸಾರಿ ಸಾರಿ
ಹೇಳೋರನ್ನ ಕಂಡು
ಗಹಗಹಿಸಿ ನಗತಾನ ಜೋಗಪ್ಪ.
ಊರೂರು ತಿರುಗ್ಯಾನ
ದಾರಿಯಲ್ಲಿ ಹಾಡ್ಯಾನ
ದೊರೆತನದ ಮಾತು ಕಲಿಸ್ಯಾನ
ಸಿರಿತನದ ಮದ ಇಳಿಸ್ಯಾನ
ಸಹಕಾರದ ಮಾತು ತಿಳಿಸ್ಯಾನ
ನಮ್ಮೂರ ಜೋಗಪ್ಪ
ನಮ್ಮನ್ನ ನೋಡಿ
ನಗತಾನ ಜೋರು ಕಣಪ್ಪ.


      ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...